ಮಡಿಕೇರಿ, ಅ. 13: ಮೈಸೂರು ದಸರಾ ‘ಯುವ ಸಂಭ್ರಮ’ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ‘ಮಹಿಳಾ ಸಬಲೀಕರಣ ಹಾಗೂ ಸಮಾನತೆ’ ಎಂಬ ವಿಷಯವನ್ನು ಅಯ್ಕೆ ಮಾಡಿಕೊಂಡು ಮಾಡಿದ ನೃತ್ಯ ಈಗ ‘ಯುವ ದಸರಾ’ಕ್ಕೆ ಆಯ್ಕೆಯಾಗಿದೆ. 160 ಕಾಲೇಜುಗಳು ಭಾಗವಹಿಸಿದ್ದ ನೃತ್ಯ ಪ್ರದರ್ಶನದಲ್ಲಿ 25 ನೃತ್ಯಗಳು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಕಾವೇರಿ ಕಾಲೇಜಿನ ನೃತ್ಯವು ಒಂದಾಗಿದೆ. ಇದೇ ತಾ. 15 ರಂದು ಯುವರಾಜ ಕಾಲೇಜು ಮೈದಾನದಲ್ಲಿ ಸಂಜೆ 6 ಗಂಟೆಗೆ ಪ್ರದರ್ಶನ ನಡೆಯಲಿದೆ.