ಸಿದ್ದಾಪುರ, ಅ. 12: ಸಂಘಟನೆಯನ್ನು ಸಂಶಯದಿಂದ ನೋಡದೆ ನಂಬಿಕೆಯೊಂದಿಗೆ ಒಗ್ಗಟ್ಟಿನ ಮೂಲಕ ಸಮಾಜಕ್ಕೆ ನ್ಯಾಯ ಕೊಡಲು ಸದಸ್ಯರು ಶ್ರಮಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಕರೆ ನೀಡಿದರು.
ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಲಾದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಸಂಘಟನೆಗೆ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರೈತ ಸಂಘಕ್ಕೆ 38 ವರ್ಷಗಳ ಇತಿಹಾಸವಿದೆ ಎಂದರು. ರೈತ ಚಳುವಳಿಯ ಮೂಲಕ ಹೋರಾಟ ಮಾಡುತ್ತ ಬಂದಿದೆ. ನೊಂದವರಿಗೆ ಸ್ಪಂದಿಸಿದೆ ಗ್ರಾಮಾಂತರ ಪ್ರದೇಶದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಸರ್ಕಾರದ ವಿರುದ್ಧ ಹೋರಾಟ ಮಾಡಿದೆ ಎಂದರು. ಈ ಹಿನೆÀ್ನಲೆಯಲ್ಲಿ ಸದÀಸ್ಯರು ರೈತ ಚಳುವಳಿ ಮುಖಾಂತರ ಸೈದ್ದಾಂತಿಕವಾಗಿ ರೈತ ಸಂಘ ಸಿದ್ದಾಪುರ, ಅ. 12: ಸಂಘಟನೆಯನ್ನು ಸಂಶಯದಿಂದ ನೋಡದೆ ನಂಬಿಕೆಯೊಂದಿಗೆ ಒಗ್ಗಟ್ಟಿನ ಮೂಲಕ ಸಮಾಜಕ್ಕೆ ನ್ಯಾಯ ಕೊಡಲು ಸದಸ್ಯರು ಶ್ರಮಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಕರೆ ನೀಡಿದರು.
ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಲಾದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಸಂಘಟನೆಗೆ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರೈತ ಸಂಘಕ್ಕೆ 38 ವರ್ಷಗಳ ಇತಿಹಾಸವಿದೆ ಎಂದರು. ರೈತ ಚಳುವಳಿಯ ಮೂಲಕ ಹೋರಾಟ ಮಾಡುತ್ತ ಬಂದಿದೆ. ನೊಂದವರಿಗೆ ಸ್ಪಂದಿಸಿದೆ ಗ್ರಾಮಾಂತರ ಪ್ರದೇಶದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಸರ್ಕಾರದ ವಿರುದ್ಧ ಹೋರಾಟ ಮಾಡಿದೆ ಎಂದರು. ಈ ಹಿನೆÀ್ನಲೆಯಲ್ಲಿ ಸದÀಸ್ಯರು ರೈತ ಚಳುವಳಿ ಮುಖಾಂತರ ಸೈದ್ದಾಂತಿಕವಾಗಿ ರೈತ ಸಂಘ ಮೈಸೂರು ವಿಭಾಗದ ಮುಖಂಡ ಅಶ್ವಥ್ ನಾರಾಯಣ್‍ರಾಜ್ ಅರಸ್ ಮಾತನಾಡಿ, ಜಿಲ್ಲೆಯ ಜೀವನದಿ ಕಾವೇರಿ ನೀರು ರಾಜ್ಯದ ಜನತೆಗೆ ನೀರು ನೀಡುತ್ತಿದ್ದು, ಇಂತಹ ಕೊಡಗು ಜಿಲ್ಲೆ ಇದೀಗ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಶೋಚನೀಯ ಸ್ಥಿತಿಯಾಗಿ ರುವದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿಕೊಂಡು ರೈತರ ಕೇವಲ ಒಂದೆರೆಡು ಲಕ್ಷ ಮನ್ನಾ ಮಾಡುವದು ಸಮಂಜಸವಲ್ಲ ಎಂದ ಅವರು, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಗಳನ್ನು ನೀಡಬೇಕೆಂದು ಒತ್ತಾಯಿಸಿದರು. ರೈತ ಮುಖಂಡ ಪಚ್ಚೆ ನಂಜುಂಡ ಸ್ವಾಮಿ ಮಾತನಾಡಿ ರೈತ ಸಂಘ ಹಿಂದಿನ ಕಾಲದಲ್ಲಿ ಪ್ರಾರಂಭ ವಾಗುವಾಗ ಕುವೆಂಪುರವರ ಪ್ರೇರಣೆ ಕೂಡ ಇತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರಗಳ ಬೆಲೆ ನೀತಿ ಜಾಗತೀಕರಣದ ವಿರುದ್ಧ ಹೋರಾಟ ಮಾಡಬೇಕೆಂದರು. ರೈತರು ತಮ್ಮ ಬದುಕನ್ನು ರಕ್ಷಿಸಿಕೊಳ್ಳ ಬೇಕೆಂದರು. ನಾವೇ ಬೆಳೆದ ಬೆಳೆಗಳನ್ನು ನಾವೇ ಮಾರಾಟ ಮಾಡುವಂತಾಗ ಬೇಕೆಂದರು. ಈ ಹಿನ್ನೆಲೆ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆಂದರು.
ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಜಿಲ್ಲಾ ಸಂಘಟನೆ ಕಾಡಾನೆಗಳ ಹಾವಳಿ ವಿರುದ್ಧ ಹೋರಾಟ ಮಾಡಿದೆ. ಅಲ್ಲದೇ ಹಲವಾರು ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಲೇ ಬರುತ್ತಿದೆ ಎಂದರು. ಕರಡಿಗೋಡಿನ ಬೆಳೆಗಾರ ಕೆ.ಪಿ. ಮೋಹನ್‍ದಾಸ್ ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟಾಗ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿಯವರ ವಿರುದ್ಧ ಮೊಕದ್ದಮೆ ಯನ್ನು ದಾಖಲಿಸಿದ್ದೆವು. ಇದು ಇತಿಹಾಸದಲ್ಲೇ ಪ್ರಥಮವಾಗಿದೆ. ಇವರುಗಳ ವಿರುದ್ಧ ಇದೀಗ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದೇವೆ ಎಂದರು. ಸದ್ಯದಲ್ಲೇ ರಾಜ್ಯ ರೈತ ಸಂಘದ ಮುಖಾಂತರ ಸರ್ಕಾರದ ಗಮನಕ್ಕೆ ತರಲಾಗುವ ದೆಂದರು. ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರೈತ ಸಂಘದ ಸದಸ್ಯರುಗಳನ್ನು ಸ್ಪರ್ಧೆಗೆ ಇಳಿಸಲಾಗುವದೆಂದರು.
ಸಂಚಾಲಕ ಚಿಮ್ಮಂಗಡ ಗಣೇಶ್ ಮಾತನಾಡಿ, ರಾಜಕಾರಣಿಗಳು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈ ಹಿನ್ನಲೆ ರೈತ ಸಂಘ ಯಾವದೇ ರಾಜಕೀಯ ಪಕ್ಷದ ಕೈಗೊಂಬೆಯಲ್ಲ ಎಂದರು. ರೈತರು ನಿರಂತರ ಹೋರಾಟ ಮಾಡುವ ಮೂಲಕ ತಮ್ಮ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳ ಬೇಕೆಂದು ಕರೆ ನೀಡಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸುಜಯ್ ಬೋಪಯ್ಯ ಮಾತನಾಡಿ, 2014ರಲ್ಲಿ ಕೊಡಗು ಜಿಲ್ಲೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಪ್ರಾರಂಭಿಸಲಾಯಿತು. ಹೈಟೆನ್ಷನ್ ವಿದ್ಯುತ್ ವಿರುದ್ಧ ಹೋರಾಟ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ತಿತಿಮತಿ ಹಾಗೂ ಸಿದ್ದಾಪುರದ ಹಲವರು ರೈತ ಸಂಘಕ್ಕೆ ಸೇರ್ಪಡೆಗೊಂಡರು. ರೈತ ಸಂಘದ ಮುಖಂಡರುಗಳಾದ ಕೆ.ಬಿ. ಹೇಮಚಂದ್ರ, ರವಿ ಪೂಣಚ್ಚ, ಬಸವರಾಜು ಲೋಕೇಶ್, ಎನ್.ಪಿ. ಮಾಚಯ್ಯ, ಎಂ.ಕೆ. ಕುಶಾಲಪ್ಪ, ಸವಿತಾ ಭೀಮಯ್ಯ, ಕೆ.ಡಿ. ನಾಣಯ್ಯ, ಇನ್ನಿತರರು ಹಾಜರಿದ್ದರು. ನಾಗೇಂದ್ರ ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಿದರು, ರಂಜಿನಿ ತಂಡ ಪ್ರಾರ್ಥಿಸಿದರು, ಸುಜಯ್ ಬೋಪಯ್ಯ ಸ್ವಾಗತಿಸಿ, ಮಂಡೇಪಂಡ ಪ್ರವೀಣ್ ಬೋಪಯ್ಯ ಕಾರ್ಯಕ್ರಮ ನಿರೂಪಿಸಿದರು, ನಡಿಕೇರಿಯಂಡ ಮಾಚಯ್ಯ ಮಂಡೇಪಂಡ ಕುಶಾಲಪ್ಪ ಉದ್ಘಾಟಿಸಿದರು.
- ಎ.ಎನ್. ವಾಸು