ಭಾಗಮಂಡಲ, ಅ. 13: ಭಾಗಮಂಡಲ-ಕರಿಕೆ ಜಂಕ್ಷನ್‍ನಿಂದ ಸುಮಾರು 8 ಕಿ.ಮೀ. ರಸ್ತೆಯನ್ನು ತಣ್ಣಿಮಾನಿಯ ಭಗವತಿ ಯುವ ಮಂಡಳಿ, ಸ್ಪೂರ್ತಿ ಮತ್ತು ಜ್ಯೋತಿ ಸ್ತ್ರೀ ಶಕ್ತಿ ಸಂಘದ ಕಾರ್ಯಕರ್ತರು ರಸ್ತೆ ಬದಿಯ ಕಸಕಡ್ಡಿಗಳನ್ನು ಶ್ರಮದಾನದ ಮೂಲಕ ತೆಗೆದು ಸ್ವಚ್ಛಗೊಳಿಸಿದರು. ಗ್ರಾ.ಪಂ.ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.