ಮಡಿಕೇರಿ, ಅ. 13: ಇತ್ತೀಚೆಗೆ ಜಿಲ್ಲೆಯ ಕೆಲವೆಡೆ ತೀವ್ರ ಸ್ವರೂಪದ ಪ್ರಾಕೃತಿಕ ಹಾನಿ ಸಂಭವಿಸಿದ್ದು, ಅತ್ಯಧಿಕ ಮಳೆ ಬೀಳುವ ಸೂರ್ಲಬ್ಬಿ ನಾಡಿನಲ್ಲಿ ಹೆಚ್ಚಿನ ಅನಾಹುತ ಸಂಭವಿಸದೆ ದೇವರು ರಕ್ಷಣೆ ನೀಡಿದ್ದಾಗಿ ನಂಬಿರುವ ಅಲ್ಲಿನ ಜನತೆ ಶ್ರೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಾಡಿನ ದೇವರುಗಳಾದ ಶ್ರೀ ಸುಬ್ರಹ್ಮಣ್ಯ, ಶ್ರೀ ಮಂಜುನಾಥ ಹಾಗೂ ಶ್ರೀ ಕಾಳತಮ್ಮೆ, ಕ್ಷೇತ್ರಪಾಲ ದೇವರುಗಳೊಂದಿಗೆ ಉಪದೈವಗಳ ಸಹಾಯದಿಂದ ಜನರಿಗೆ ಅಲ್ಪ ಅಪಾಯವಾದರೂ ಕಷ್ಟ-ನಷ್ಟದಿಂದ ಸಂರಕ್ಷಿಸಲಾಗಿದೆ ಎಂದು ಪೂಜೆಯೊಂದಿಗೆ ಸಮಾಧಾನದ ನಿಟ್ಟುಸಿರುಬಿಟ್ಟರು. ಸೂರ್ಲಬ್ಬಿ, ಮುಟ್ಲು, ಮಂಕ್ಯ, ಕಿಕ್ಕರಳ್ಳಿ, ಕುಂಬಾರಗಡಿಗೆ, ಹಚ್ಚಿನಾಡು, ಹಮ್ಮಿಯಾಲದ ಜನತೆ ಪಾಲ್ಗೊಂಡಿದ್ದರು.