ಮಡಿಕೇರಿ, ಅ. 12: ಕೊಡ್ಲಿಪೇಟೆ ಹೋಬಳಿಯ ಕೆಳಕೊಡ್ಲಿ ಗ್ರಾಮದಲ್ಲಿ ಪರಿಶಿಷ್ಟರಿಗೆ ಮೀಸಲಾಗಿದ್ದ ‘ಸ್ಮಶಾನ ಜಾಗ’ವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದ್ದು, ಇದನ್ನು ಮುಂದಿನ 15 ದಿನಗಳ ಒಳಗಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಜಿಲ್ಲಾಧಿಕಾರಿಗಳ ಕಚೆÉೀರಿ ಮುಂಭಾಗ ಪ್ರತಿಭಟನೆ ನಡೆಸುವದಾಗಿ ದಲಿತ ಸಂಘರ್ಷ ಸಮಿತಿ (ಸಂಯೋಜಕ)ಯ ಜಿಲ್ಲಾ ಸಂಚಾಲಕ ಜೆ.ಆರ್. ಪಾಲಾಕ್ಷ ಎಚ್ಚರಿಕೆ ನೀಡಿದ್ದಾರೆ.

ಮಂಜೂರಾಗಿದೆ. ಈ ಮಂಜೂರಾತಿ ಯೂ ಕಾನೂನು ಬದ್ಧವಾಗಿ ಸರಿಯಾದುದಲ್ಲ. ಅಕ್ರಮ ಸಕ್ರಮದಡಿ ಜಾಗ ಮಂಜೂರಾತಿಯಾಗಬೇಕಾದಲ್ಲಿ ಸಂಬಂಧಿಸಿದ ವ್ಯಕ್ತಿ ಅದೇ ಜಿಲ್ಲೆಯವ ರಾಗಿರಬೇಕಾದುದು ಅವಶ್ಯ. ಆದರೆ, ಈ ಪ್ರಕರಣದಲ್ಲಿ ಜಾಗ ಮಂಜೂರಾತಿ ಯಾದ ವ್ಯಕ್ತಿ ಹೊರ ಜಿಲ್ಲೆಯವ ರಾಗಿದ್ದು, ತನಗೆ ಮಂಜೂರಾದ ಜಾಗದ ಪಕ್ಕದಲ್ಲೆ ಇರುವ ಪರಿಶಿಷ್ಟರಿಗೆ ಮೀಸಲಾದ 2 ಎಕರೆ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿ ಬೇಲಿ ಹಾಕಿಕೊಂಡಿರುವದಾಗಿ ಆರೋಪಿಸಿ ದರು. ಈ ಒತ್ತುವರಿಯನ್ನು ಪ್ರಶ್ನಿಸಿದ ಗ್ರಾಮಸ್ಥರನ್ನು ಬೆದರಿಸುವ, ಕಿರುಕುಳ ನೀಡುವ ಘಟನೆಗಳು ನಡೆದಿರುವದಾಗಿ ಪಾಲಾಕ್ಷ ಆರೋಪಿಸಿದರು.
ಜಾಗ ಒತ್ತುವರಿಗೆ ಸಂಬಂಧಿಸಿ ದಂತೆ 2016ರಲ್ಲೆ ತಾಲೂಕು ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಕೊಡ್ಲಿಪೇಟೆ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಕೆಳಕೊಡ್ಲಿ ಗ್ರಾಮದಲ್ಲಿ ಪರಿಶಿಷ್ಟರಿಗೆ ಮೀಸಲಾಗಿರುವ ಜಾಗ ಒತ್ತುವರಿಯನ್ನು ಗುರುತಿಸಿ,ಈ ಬಗ್ಗೆ ಕ್ರಮ ಕೈಗೊಳ್ಳಬಹುದೆನ್ನುವ ವರದಿಯನ್ನು ನೀಡಿದ್ದಾರೆ. ಹೀಗಿದ್ದೂ ಜಾಗ ಒತ್ತುವರಿದಾರರ ವಿರುದ್ಧ ಯಾವದೇ ಕ್ರಮ ಜರುಗಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಹಶೀಲ್ದಾರರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗಳಿಗೂ ಮನವಿ ಸಲ್ಲಿಸಿ ಒತ್ತುವರಿ ಸ್ಮಶಾನ ಜಾಗ ತೆರವಿಗೆ ಮನವಿ ಮಾಡಲಾಗುತ್ತದೆ. ಇದಕ್ಕೆ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ಪ್ರತಿಭಟನೆ ನಡೆಸುವದಾಗಿ ಹೇಳಿದರು.
ಗೋಷ್ಠಿಯಲ್ಲಿ ದಸಂಸ (ಸಂಯೋಜಕ)ದ ಸೋಮವಾರಪೇಟೆ ತಾಲೂಕು ಸಂಚಾಲಕ ಎನ್.ಆರ್. ದೇವರಾಜು, ಕೆಳಕೊಡ್ಲಿ ಗ್ರಾಮದ ಚಂದ್ರ, ಮಹೇಶ್, ಚಂದ್ರಶೇಖರ್, ರಾಜೇಶ್ ಉಪಸ್ಥಿತರಿದ್ದರು.