ಕುಶಾಲನಗರ, ಅ 13: ಕುಟುಂಬವೊಂದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮರಳು ಮಾಫಿಯಾ ದಂಧೆಯ ಆರೋಪಿಗಳಿಗೆ ಕುಶಾಲನಗರ ನ್ಯಾಯಾಲಯವು ತಪಿಸ್ಥರೆಂದು ತೀರ್ಪು ನೀಡಿ 7 ಮಂದಿಗೆ ಶಿಕ್ಷೆ ವಿಧಿಸಿದೆ
ಹೆಬ್ಬಾಲೆ ಗ್ರಾಮದ ನಿವಾಸಿ ಕಲಾವಿದರಾದ ವಿಜಯಕುಮಾರ್ ಮತ್ತು ಕುಟುಂಬ ಸದಸ್ಯರ ಮೇಲೆ ಅಕ್ಟೋಬರ್ 2016 ರಲ್ಲಿ ಪಿರಿಯಾಪಟ್ಟಣ ಸಮೀಪದ ಚಾಮರಾಯನ ಕೋಟೆಯ ನಿವಾಸಿಗಳಾದ ಸ್ವಾಮಿ ನಾಯಕ, ನಾಗಭೂಷಣ, ರಜಿತ್, ಹರೀಶ್, ಜಲೇಂದ್ರ, ನಂಜುಂಡಸ್ವಾಮಿ, ಸತೀಶ್ ಎಂಬುವವರುಗಳ ಗುಂಪು ಸೇರಿ ಹಲ್ಲೆ ನಡೆಸಿದ್ದರು. ಆರೋಪಿಗಳು ಮನೆಗೆ ನುಗ್ಗಿ ಏಕಾಏಕಿ ವಿಜಯಕುಮಾರ್, ಪತ್ನಿ, ಮಕ್ಕಳು ಮತ್ತು ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ ಹಿನ್ನಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣವು ವಿಚಾರಣೆ ನಡೆದು ಆರೋಪಿಗಳಿಗೆ ದಂಡ ವಿಧಿಸಿ ಎಚ್ಚರಿಕೆಯೊಂದಿಗೆ ತೀರ್ಪು ನೀಡಿದೆ.