ಮಡಿಕೇರಿ, ಅ. 13: ಕೊಡವ ಸಮಾಜ ಹುದಿಕೇರಿ ವತಿಯಿಂದ ಪೊನ್ನಂಪೇಟೆಯ ಶ್ರೀ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ಸಂತ್ರಸ್ತ ಕುಟುಂಬದ ಮಕ್ಕಳನ್ನು ಭೇಟಿ ಮಾಡಿ ಸಂಸ್ಥೆಯ ಅಧ್ಯಕ್ಷ ಝರು ಗಣಪತಿ ಅವರೊಂದಿಗೆ ಮಾತುಕತೆ ನಡೆಸಿ ಸಂತ್ರಸ್ತ ಮಕ್ಕಳ ಉಪಯೋಗಕ್ಕಾಗಿ
ರೂ. 25450 ನೀಡಲಾಯಿತು. ಈ ಸಂದರ್ಭ ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೋದಂಡ ಸನ್ನು ಉತ್ತಪ್ಪ, ಮಾಜಿ ಅಧ್ಯಕ್ಷ ಚೆಕ್ಕೇರ ವಾಸು ಕುಟ್ಟಪ್ಪ, ಕಾರ್ಯದರ್ಶಿ ಮಂಡಂಗಡ ಅಶೋಕ್, ಮಾಜಿ ಕಾರ್ಯದರ್ಶಿ ಚೆಕ್ಕೇರ ಹರೀಶ್ ನಂಜಪ್ಪ ಮತ್ತು ವ್ಯವಸ್ಥಾಪಕ ಕಿರಿಯಮಾಡ ರಾಜ್ ಕುಶಾಲಪ್ಪ ಉಪಸ್ಥಿತರಿದ್ದರು.