ನಾಪೆÇೀಕ್ಲು, ಅ. 22: ಅ. 21ರಂದು ನಾಪೆÇೀಕ್ಲು ಮತ್ತು ಕಕ್ಕಬ್ಬೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎರಡೂ ಕಡೆಗಳಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಭಾರಿಸಿದರು.

ನಾಪೆÇೀಕ್ಲುವಿನಲ್ಲಿ 13 ಸ್ಥಾನಗಳಲ್ಲಿ ಪೈಕಿ 13 ಸ್ಥಾನವೂ ಬಿಜೆಪಿ ಬೆಂಬಲಿತರ ಪಾಲಾದರೆ, ಕಕ್ಕಬ್ಬೆಯಲ್ಲಿ 12 ಸ್ಥಾನಗಳೂ ಬಿಜೆಪಿ ಪಾಲಾಯಿತು.

ನಾಪೆÇೀಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕೇಟೋಳಿರ ಹರೀಶ್ ಪೂವಯ್ಯ ಮತ್ತು ಎನ್.ಎಸ್.ಉದಯಶಂಕರ್ ಮೂರನೇ ಬಾರಿಗೆ ಜಯಗಳಿಸಿದರೆ, ಅರೆಯಡ ಅಶೋಕ್, ಕಾಂಡಂಡ ಜಯಾ ಕರುಂಬಯ್ಯ, ಕುಂಡ್ಯೋಳಂಡ ಕವಿತಾ ಮುತ್ತಣ್ಣ, ಬಿದ್ದಾಟಂಡ ರಾಧಾ ಗಣಪತಿ, ಕೇಲೇಟಿರ ಮಾಲಾ ಮುತ್ತಮ್ಮ, ಹೆಚ್.ಎ.ಬೊಳ್ಳು ಎರಡನೇ ಬಾರಿಗೆ ಆಯ್ಕೆಯಾದರೆ, ಚೋಕಿರ ಪ್ರಭು ಪೂವಪ್ಪ, ಚೀಯಕಪೂವಂಡ ಸತೀಶ್ ದೇವಯ್ಯ, ಕುಂದೈರೀರ ಕಿರಣ್, ಮೊದಲ ಬಾರಿಗೆ ಆಯ್ಕೆಯಾದರೆ, ಮೇದರ ವಾಸು ಅವಿರೋಧವಾಗಿ ಆಯ್ಕೆಯಾದರು.

ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಲ್ಯಾಟಂಡ ರಘು ತಮ್ಮಯ್ಯ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದು, ಪರದಂಡ ಪ್ರಮೀಳಾ ಪೆಮ್ಮಯ್ಯ, ಅಲ್ಲಾರಂಡ ಸನ್ನು ಅಯ್ಯಪ್ಪ, ಎರಡನೇ ಬಾರಿ ಜಯಗಳಿಸಿದ್ದಾರೆ. ಉಳಿದಂತೆ ಬಡಕಡ ಸುರೇಶ್ ಬೆಳ್ಯಪ್ಪ, ಕಲ್ಯಾಟಂಡ ಯತೀಶ್‍ಬೋಪಣ್ಣ, ನೆಡುಮಂಡ ಹರೀಶ್‍ಪೂವಯ್ಯ, ನಂಬಡಮಂಡ ಸುನಿತಾ ಭೀಮಯ್ಯ, ಎ.ಹೆಚ್.ಲಕ್ಷ್ಮಣ, ಪಾಲೇರ ಕಾರ್ಯಪ್ಪ, ಕುಡಿಯರ ಗಿರೀಶ್, ಕೋಡಿಮಣಿಯಂಡ ವಿಜು ನಾಣಯ್ಯ, ಕೋಲೆಯಂಡ ಅಶೋಕ್ ಮೊದಲ ಬಾರಿಗೆ ಆಯ್ಕೆಯಾದರು.

ವಿಜಯದ ಹಿನೆÀ್ನಲೆಯಲ್ಲಿ ನಾಪೆÇೀಕ್ಲು ಪಟ್ಟಣದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.