ಚೆಟ್ಟಳ್ಳಿ, ಅ. 22 : ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಮಟ್ಟಂ ಎಸ್ಸೆಸ್ಸೆಫ್ ಯೂನಿಟ್ ವತಿಯಿಂದ ಆರೋಗ್ಯ ದ ಬಗ್ಗೆ ಕಾಳಜಿ ಹಾಗೂ ಸಾಂಕ್ರಾಮಿಕ ರೋಗಗಳ ಹರಡುವಿಕೆಯ ತಡೆಯಲು ಜಾಗೃತಿ ಮೂಡಿಸುವ ಉದ್ದೇಶದಿಂದ ತಾಜುಲ್ ಉಲಮಾ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು. ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಅಹ್ಮದ್ ಶಹಬ್ ನೇತೃತ್ವ ವಹಿಸಿದ್ದರು. ಮಹಲ್ ಅಧ್ಯಕ್ಷ ಎಂ ಹುಸೈನ್. ಮಹಲ್ ಖತೀಬರಾದ ಬಶೀರ್ ಅಝ್ಹರಿ. ಸೂಫಿ ಉಸ್ತಾದ್. ಯೂನಿಟ್ ಅಧ್ಯಕ್ಷ ರಫೀಕ್ ಸಿ. ಎಂ. ಪ್ರಧಾನ ಕಾರ್ಯದರ್ಶಿ ನಿಝಾಮುದ್ದೀನ್, ರಫೀಕ್ ಎಂ. ಎಚ್. ಇನ್ನಿತರರು ಹಾಜರಿದ್ದರು.