ಶನಿವಾರಸಂತೆ, ಅ. 22: ಪಂಚಾಯಿತಿಗೆ ಕ್ರಿಯಾ ಯೋಜನೆ ತಯಾರಿಸಲು ಅಗತ್ಯವಾದ 5 ಗ್ರಾಮಗಳ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಿದ್ದು, ಸಮರ್ಪಕವಾಗಿ ಕಾರ್ಯ ನಿರ್ವಹಿಸಿರುತ್ತಾರೆ ಎಂದು ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಶ್ಲಾಘಿಸಿದರು.

ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜನ ಯೋಜನೆ, ಅಭಿಯಾನ ಯೋಜನೆ, ನಮ್ಮ ಗ್ರಾಮ- ನಮ್ಮ ಯೋಜನೆಯ ಕರಡು ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಂಚಾಯಿತಿಗೆ ಬೇಕಾದ ಸೌಲಭ್ಯಗಳ ಮಾಹಿತಿ ಸಂಗ್ರಹಿಸಿ ಒಪ್ಪಿಸಿದ ವರದಿಯನ್ನು ಪಂಚಾಯಿತಿ ಅನುಮೋದಿಸಿದೆ. 20 ವರ್ಷಗಳಿಗೆ ಬೇಕಾದ ಮಾಹಿತಿ ಸಂಗ್ರಹವಾಗಿದೆ ಎಂದರು.

ಪಿಡಿಒ ಸುಮೇಶ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಸಂಗ್ರಹಿಸಿ ದೊಡ್ಡಕೊಳತ್ತೂರು, ದುಂಡಳ್ಳಿ, ದೊಡ್ಡಬಿಳಾಹ, ಮಾದ್ರೆ, ಸುಳುಗಳಲೆ- ಬಿದರೂರು ಗ್ರಾಮಗಳ ಮಾಹಿತಿ ಆಧಾರದ ಮೇಲೆ ಪಂಚಾಯಿತಿ ಕ್ರಿಯಾ ಯೋಜನೆ ರೂಪಿಸುತ್ತದೆ ಎಂದು ಹೇಳಿದರು. ಮಾಹಿತಿ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ನೋಡಲ್ ಅಧಿಕಾರಿ ಸಿಂಧು ತಮ್ಮ ಇಲಾಖೆಯ ಸೌಲಭ್ಯಗಳ ಮಾಹಿತಿ ನೀಡಿದರು.

ಜಿ. ಪಂ. ಸದಸ್ಯೆ ಸರೋಜಮ್ಮ, ಪಶು ವೈದ್ಯಾಧಿಕಾರಿ ಡಾ. ಲತಾ, ಪಂಚಾಯಿತಿ ಸದಸ್ಯರಾದ ಎನ್. ಕೆ. ಸುಮತಿ, ಮನುಹರೀಶ್, ನೇತ್ರಾವತಿ, ಪಾರ್ವತಿ, ಬಿಂದಮ್ಮ, ಕಮಲಮ್ಮ, ರಕ್ಷಿತ್, ಸಂತೋಷ್, ಯೋಗೇಂದ್ರ, ಹೂವಣ್ಣ, ಸಂದೇಶ್, ಕಾರ್ಯದರ್ಶಿ ವೇಣುಗೋಪಾಲ್, ಲೆಕ್ಕ ಸಹಾಯಕ ದೇವರಾಜ್, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.