ಮಡಿಕೇರಿ, ಅ. 22: ಮಾವನ ಮನೆಗೆ ಬಂದಿದ್ದ ಅಳಿಯನೊಬ್ಬ ತನ್ನ ಪತ್ನಿಯ ಸಹೋದರ ಸಂಬಂಧಿಯ ಜೊತೆಯಲ್ಲಿ ಅಕ್ರಮ ಬೇಟೆಗೆ ತೆರಳಿರುವ ಸುಳಿವಿನ ನಡುವೆ, ಪ್ರಾಣಿಯೆಂದು ಶಂಕಿಸಿ ಗುಂಡು ಹಾರಿಸಿರುವ ವೇಳೆ ಒಬ್ಬಾತ ಬಲಿಯಾಗಿರುವ ದುರ್ಘಟನೆ ಮಕ್ಕಂದೂರು ಸಮೀಪದ ಹೆಮ್ಮೆತ್ತಾಳು ಗ್ರಾಮದಲ್ಲಿ ಸಂಭವಿಸಿದೆ.ಅಲ್ಲಿನ ನಿವಾಸಿ ಅಯ್ಯಕುಟ್ಟಿರ ದೇವಯ್ಯ ಎಂಬವರ ಪುತ್ರ ರಂಜಿತ್ (31) ಗುಂಡೇಟಿನಿಂದ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾನೆ. ದೇವಯ್ಯ ಅವರ ಅಣ್ಣ ಪೂವಯ್ಯ ಎಂಬವರ ಅಳಿಯ ಕಾಳಿಮಾಡ ದಿನೇಶ್ ಎಂಬಾತ ಗುಂಡು ಹಾರಿಸಿದ ಸಂದರ್ಭ ರಂಜಿತ್ ದುರ್ಮರಣ ಗೊಂಡಿದ್ದಾಗಿ ಹೇಳಲಾಗುತ್ತಿದೆ. ಹೆಮ್ಮೆತ್ತಾಳುವಿನ ಪೂವಯ್ಯ ಅವರ ಪುತ್ರಿಯನ್ನು ವಿವಾಹವಾಗಿರುವ ದಕ್ಷಿಣ ಕೊಡಗಿನ ವೆಸ್ಟ್‍ನೆಮ್ಮಲೆ ನಿವಾಸಿ ದಿನೇಶ್, ನಿನ್ನೆ ಸಂಜೆ 5.30ರ ಸುಮಾರಿಗೆ ಮಾವನ ಕೋವಿ ಯೊಂದಿಗೆ, ರಂಜಿತ್ ಜತೆಗೂಡಿ ಕಾಫಿ ತೋಟದ ನಡುವೆ ಸುಮಾರು ಒಂದು ಕಿ.ಮೀ. ದೂರದಲ್ಲಿ ಬೇಟೆಯಾಡಲು ತೆರಳಿದ್ದಾಗಿ ಹೇಳಲಾಗುತ್ತಿದೆ.

ಈ ವೇಳೆ ರಂಜಿತ್ ಬಳಿಯೂ ಆತನ ತಂದೆಯ ಕೋವಿ ಇದ್ದುದಾಗಿ ತಿಳಿದು ಬಂದಿದೆಯಲ್ಲದೆ, ಆತನ ಎದೆ (31) ಗುಂಡೇಟಿನಿಂದ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾನೆ. ದೇವಯ್ಯ ಅವರ ಅಣ್ಣ ಪೂವಯ್ಯ ಎಂಬವರ ಅಳಿಯ ಕಾಳಿಮಾಡ ದಿನೇಶ್ ಎಂಬಾತ ಗುಂಡು ಹಾರಿಸಿದ ಸಂದರ್ಭ ರಂಜಿತ್ ದುರ್ಮರಣ ಗೊಂಡಿದ್ದಾಗಿ ಹೇಳಲಾಗುತ್ತಿದೆ. ಹೆಮ್ಮೆತ್ತಾಳುವಿನ ಪೂವಯ್ಯ ಅವರ ಪುತ್ರಿಯನ್ನು ವಿವಾಹವಾಗಿರುವ ದಕ್ಷಿಣ ಕೊಡಗಿನ ವೆಸ್ಟ್‍ನೆಮ್ಮಲೆ ನಿವಾಸಿ ದಿನೇಶ್, ನಿನ್ನೆ ಸಂಜೆ 5.30ರ ಸುಮಾರಿಗೆ ಮಾವನ ಕೋವಿ ಯೊಂದಿಗೆ, ರಂಜಿತ್ ಜತೆಗೂಡಿ ಕಾಫಿ ತೋಟದ ನಡುವೆ ಸುಮಾರು ಒಂದು ಕಿ.ಮೀ. ದೂರದಲ್ಲಿ ಬೇಟೆಯಾಡಲು ತೆರಳಿದ್ದಾಗಿ ಹೇಳಲಾಗುತ್ತಿದೆ.

ಈ ವೇಳೆ ರಂಜಿತ್ ಬಳಿಯೂ ಆತನ ತಂದೆಯ ಕೋವಿ ಇದ್ದುದಾಗಿ ತಿಳಿದು ಬಂದಿದೆಯಲ್ಲದೆ, ಆತನ ಎದೆ ಗೊಂಡಿದ್ದು, ತನಿಖೆಯ ಬಳಿಕವಷ್ಟೇ ಸತ್ಯಾಂಶ ಬಯಲಿಗೆ ಬರಬೇಕಿದೆ. ಅಲ್ಲದೆ, ಘಟನೆಯ ಬಳಿಕ ದಿನೇಶ್ ತಲೆಮರೆಸಿಕೊಂಡಿರುವದು ಮತ್ತಷ್ಟು ಗೊಂದಲ ಸೃಷ್ಟಿಸಿದೆ. ಇನ್ನೊಂದೆಡೆ ಮೃತ ರಂಜಿತ್ ತಂದೆ ದೇವಯ್ಯ ನೀಡಿರುವ ದೂರಿನಲ್ಲಿ ಸಂಜೆ ಇಬ್ಬರು ಬೇಟೆಗೆ ತೆರಳುವದ ರೊಂದಿಗೆ 6 ಗಂಟೆಯ ಹೊತ್ತಿಗೆ ಗುಂಡೇಟಿನ ಶಬ್ದ ಕೇಳಿ ತೆರಳುವಷ್ಟರಲ್ಲಿ ಘಟನೆ ಸಂಭವಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಶಂಕೆ ಇದೆ: ಮೃತ ರಂಜಿತ್ ಸಾವಿನ ಬಗ್ಗೆ ಪೊಲೀಸ್ ಇಲಾಖೆ ದೂರು ಆಧರಿಸಿ ತನಿಖೆ ಕೈಗೊಂಡಿರು ವದಾಗಿ ಖಚಿತಪಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಗುಂಡು ಹಾರಿಸಿರುವ ದಿನೇಶ್ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಬಳಿಕ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಗುಂಡೇಟು ಪ್ರಕರಣ ಕುರಿತು ಶಂಕೆ ಯಿರುವದಾಗಿ ಸುಳಿವು ನೀಡಿದ್ದಾರೆ.

ಇಂದು ಘಟನೆ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸಹಿತ ವೃತ್ತ ನಿರೀಕ್ಷಕ ಭರತ್, ಗ್ರಾಮಾಂತರ ಠಾಣಾಧಿಕಾರಿ ಚೇತನ್ ಹಾಗೂ ಸಿಬ್ಬಂದಿ ತೆರಳಿ ಮಹಜರು ನಡೆಸಿದ್ದಾರೆ. ಅಲ್ಲದೆ, ಮೃತನ ಶವವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯೊಂದಿಗೆ ಬಂಧುಗಳಿಗೆ ಹಸ್ತಾಂತರಿಸಿದ್ದು, ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಸಲಾಗಿದೆ. ಗ್ರಾಮಸ್ಥರು ಕೂಡ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ್ದು, ಪೊಲೀಸರ ತನಿಖೆಯಿಂದಷ್ಟೇ ನೈಜಾಂಶ ಹೊರಬರಬೇಕಿದೆ. ಮೃತ ದಿನೇಶ್ ತಂದೆ, ತಾಯಿಯೊಂದಿಗೆ ಇಬ್ಬರು ಸೋದರಿಯರನ್ನು ಅಗಲಿದ್ದು, ಅವಿವಾಹಿತನಾಗಿದ್ದ.