ಮಡಿಕೇರಿ, ಅ. 22: ಕರ್ನಾಟಕ ಎನ್.ಸಿ.ಸಿ. ಬೆಟಾಲಿಯನ್ 19ರ ಆಶ್ರಯದಲ್ಲಿ ಕೂಡಿಗೆ ಗ್ರಾಮದಲ್ಲಿ ತಂಬಾಕು ವಿರೋಧಿ ಮತ್ತು ರಸ್ತೆ ಸುರಕ್ಷತಾ ಜಾಗೃತಿ ಜಾಥಾ ನಡೆಯಿತು.
ಸೈನಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ 10 ದಿನಗಳ ತರಬೇತಿ ಕಾರ್ಯಾಗಾರದ ಅಂಗವಾಗಿ ಎನ್.ಸಿ.ಸಿ. ಕೆಡೆಟ್‍ಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಘೋಷಣೆ ಕೂಗಿ ಜಾಗೃತಿ ಮೂಡಿಸಿದರು. ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಅರಿವು ಮೂಡಿಸಲಾಯಿತು. ಜಾಥಾದಲ್ಲಿ ಪಾಲ್ಗೊಂಡಿದ್ದ 300 ಕ್ಕೂ ಅಧಿಕ ಕೆಡೆಟ್‍ಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಅರಿವು ಮೂಡಿಸಿದರು.
ಕ್ಯಾಂಪ್ ಕಮಾಡೆಂಟ್ ಕರ್ನಲ್ ವಿ.ಎಂ. ನಾಯಕ್, ಕ್ಯಾಂಪ್‍ನ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಸಂಜಯ್ ಆಷ್ಟೆ, ಕ್ಯಾಪ್ಟನ್ ದಿನೇಶ್, ಲೆಫ್ಲಿನೆಂಟ್ ಕರ್ನಲ್ ಜಾನ್ಸನ್, ಲೆಫ್ಟಿನೆಂಟ್ ವಿಪಿನ್ ಕುಮಾರ್ ಮತ್ತಿತರರು ಇದ್ದರು.