ಸೋಮವಾರಪೇಟೆ, ಅ. 22: ಪಟ್ಟಣದ ಹಿರಿಯ ವಕೀಲ ಬಿ. ಈ. ಜಯೇಂದ್ರ ಅವರನ್ನು ಸೋ.ಪೇಟೆ ತಾಲೂಕಿನ ನೋಟರಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೂಲತಃ ಬೆಟ್ಟದಳ್ಳಿ ಗ್ರಾಮದವರಾದ ಜಯೇಂದ್ರ ಅವರು, ಕಳೆದ 18 ವರ್ಷಗಳಿಂದ ಸೋಮವಾರಪೇಟೆ ನ್ಯಾಯಾಲಯ ದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು, 15-10-2018ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರದ ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿ ಆರ್. ಪದ್ಮಾವತಿ ಅವರು ನೋಟರಿಯಾಗಿ ನೇಮಕ ಮಾಡಿ ಆದೇಶ ನೀಡಿದ್ದಾರೆ.