ನಾಪೋಕ್ಲು, ಅ. 22 : ಇಲ್ಲಿಗೆ ಸಮೀಪದ ಕೈಕಾಡುವಿನ ಮಕ್ಕೋಟು ಶ್ರೀ ಮಹಾಲಕ್ಷ್ಮಿದೇವಾಲಯ ನಾಡಿನ ಪುರಾತನ ದೇವಾಲಯವಾಗಿದ್ದು, ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ. ಈ ದೇವಾಲಯದ ಗರ್ಭಗುಡಿಯ ಜೀರ್ಣೋದ್ಧಾರವನ್ನು 9ವರ್ಷಗಳ ಹಿಂದೆ ಕೈಗೊಂಡಿದ್ದು ಪೌಳಿ ಕೆಲಸ ಬಾಕಿ ಉಳಿದಿತ್ತು. ದಾನಿಗಳ ನೆರವಿನಿಂದ ಭರದಿಂದ ಸಾಗುತ್ತಿದ್ದು ಸುಮಾರು 50ಲಕ್ಷ ರೂ. ವೆಚ್ಚದಲ್ಲಿ ದೇವಾಲಯದ ಕೆಲಸ ಕಾರ್ಯಗಳು ನಡೆಯುತ್ತಿವೆ. ಈ ದೇವಾಲಯದ ಅಭಿವೃದ್ಧಿಗೆ ಸರ್ಕಾರ ರೂ. 20ಲಕ್ಷ ಮಂಜೂರು ಮಾಡಿದೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ 1.5 ಲಕ್ಷ ನೀಡಿದ್ದು. ಆಡಳಿತ ಮಂಡಳಿ ಹಾಗೂ ಭಕ್ತ ವರ್ಗದಿಂದ 9ಲಕ್ಷ ರೂ. ಸಂಗ್ರಹಿಸಿ ಪೌಳಿ ಕಾಮಗಾರಿ ನಡೆಸಲಾಗುತ್ತಿದೆ. ಎರಡು ವರ್ಷಗಳಿಗೊಮ್ಮೆ ಇಲ್ಲಿ ವಿಜೃಂಭಣೆಯಿಂದ ಉತ್ಸವ ನಡೆಯುತ್ತದೆ. ಇಲ್ಲಿನ ಮಕ್ಕೋಟು ಕೇರಿಯ ಏಳು ಕುಟುಂಬಗಳ ಸದಸ್ಯರು ಉತ್ಸವದ ಮುನ್ನ ನಿತ್ಯ ಒಟ್ಟಾಗಿ ಸೇರಿ ವಿವಿಧ ರೀತಿಯ ನೃತ್ಯ ತರಬೇತಿ ಪಡೆದು ಉತ್ಸವದ ದಿನ ದೇವಸ್ಥಾನದ ಎದುರು ವಿಶೇಷ ನೃತ್ಯಗಳನ್ನು ಪ್ರದರ್ಶಿಸುತ್ತಾರೆ. ಇದೀಗ ಕೆಲಸ ಕಾರ್ಯಕ್ಕೆ 10 ಲಕ್ಷ ರೂ. ಸಂಗ್ರಹಿಸಬೇಕಾಗಿದ್ದು ದೇವಾಲಯದ ಜೀರ್ಣೋದ್ಧಾರ ಅಭಿವೃದ್ಧಿಗೆ ಭಕ್ತರು ಸಹಕಾರ ನೀಡುವಂತೆ ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ. ಸಂಪರ್ಕಕ್ಕೆ ಮೊಬೈಲ್ ನಂಬರ್ 9449077491. ಕಾರ್ಪೋರೇಷನ್ ಬ್ಯಾಂಕ್ ಪಾರಾಣೆ. ಖಾತೆ ಸಂಖ್ಯೆ 520101251878