ಸುಂಟಿಕೊಪ್ಪ, ಅ. 22: ಸುಂಟಿಕೊಪ್ಪ ನಾಡು ಗೌಡ ಸಂಘ ವಾರ್ಷಿಕ ಮಹಾಸಭೆಯಲ್ಲಿ ಈ ಬಾರಿ ಅತಿವೃಷ್ಟಿಯಿಂದ ಸಂತ್ರಸ್ಥರಾದ ಗೌಡ ಜನಾಂಗದ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ತೀರ್ಮಾನಿಸ ಲಾಯಿತು.

ಗೌಡ ಸಂಘ ನಾಡು ಅಧ್ಯಕ್ಷ ಯಂಕನ ಉಲ್ಲಾಸ್ ಅವರ ಅಧ್ಯಕ್ಷತೆಯಲ್ಲಿ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ವಾರ್ಷಿಕ ಮಹಾ ಸಭೆ ನಡೆಯಿತು.

ವರದಿವಾಚನ, ಲೆಕ್ಕ ಪತ್ರ ಮಂಡನೆ ನಂತರ ಇತರ ವಿಷಯದ ಬಗ್ಗೆ ಚರ್ಚೆಗೆ ಗೌಡ ಸಂಘದ ಉಪಾಧ್ಯಕ್ಷ ಬಿಳಿಯರ ಮಂಜುನಾಥ್ ಅವಕಾಶ ಕಲ್ಪಿಸಿದರು. ಗೌಡ ಸಂಘದ ಕಛೇರಿ ಕಲ್ಯಾಣ ಮಂಟಪಕ್ಕೆ ಜಾಗ ಖರೀದಿ ಮಾಡಿ ಶ್ರೀಘ್ರದಲ್ಲೇ ಖಾತೆಗೆ ತೆಗೆದುಕೊಂಡು ನಿರ್ಮಿಸುವ ಮೂಲಕ ಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.

ಕಡ್ಯದ ಅರುಣ್ ಮಾತನಾಡಿ ಈಗಾಗಲೇ ಸಂಘಕ್ಕೆ ಜಾಗ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ; 1.42 ಎಕ್ರೆ ಜಾಗ ಗೊತ್ತು ಪಡಿಸಲಾಗಿದ್ದು ಜಾಗದ ದಾಖಲೆ ಪತ್ರದ ಪರಿಶೀಲನೆಯಲ್ಲಿ ಅತಿವೃಷ್ಟಿಯಿಂದಾಗಿ ಕಂದಾಯ ಇಲಾಖೆಯಲ್ಲಿ ಕೆಲಸ ವಿಳಂಬವಾಗಿದೆ ಎಂದರು.

ಗೌಡ ಸಂಘದ ಸದಸ್ಯರುಗಳ ಮಕ್ಕಳಾದ ಎಸ್‍ಎಸ್‍ಎಲ್‍ಸಿ ಅತಿ ಹೆಚ್ಚು ಅಂಕಗಳಿಸಿದ ಎಂ. ಎ. ಪಕೃತಿ, ಶ್ರೇಯಸ್, ಯಂಕನ ಗಿರೀಶ್, ದ್ವಿತೀಯ ಪಿಯುಸಿಯಲ್ಲಿ ಬಿ. ಆರ್. ಜಯಂತ್, ಎಂ. ಬಿ. ನಿಕಿಲ್, ಬಿ. ಜೆ. ಗ್ರೀಷ್ಮ ಅವರುಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕಾರ್ಯದರ್ಶಿ ಯಂಕನ ಕೌಶಿಕ್, ಸಹ ಕಾರ್ಯದರ್ಶಿ ಮಾಗಿಲು ವಸಂತ, ಖಜಾಂಚಿ ಪಟ್ಟೆಮನೆ ಉದಯ, ನಿರ್ದೇಶಕರಾದ ಪಟ್ಟೆಮನೆ ಕುಸುಮ, ಯಂಕನ ಕೃಪಾ, ಮಟ್ರಮಾಡ ಸೋಮಯ್ಯ, ಒಡಿಯಪ್ಪನ ಸುದೀಶ, ಕುಂಜಿಲನ ಮಂಜು,ಸುಮಿತ್ರ ಶೇಖರ್, ಬೈಚನ ಮೋಹನ್, ಉಪಸ್ಥಿತರಿದ್ದರು. ಉಪಾದ್ಯಕ್ಷ ಬಿಳಿಯಾರ ಮಂಜು ಸ್ವಾಗತಿಸಿ ಪಟ್ಟೆಮನೆ ಕುಸುಮ ವಂದಿಸಿರು ಮಾಗಿಲು ವಸಂತ ವರದಿ ವಾಚಿಸಿದರು, ಕೌಶಿಕ್ ನಿರೂಪಿಸಿದರು.