ಸೋಮವಾರಪೇಟೆ, ಅ. 22: ಸಮೀಪದ ಐಗೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಸಂಘದ ಸಭಾಂಗಣದಲ್ಲಿ ನಡೆಯಿತು. ಒಟ್ಟು 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಗಳು ಅಂತಿಮ ಹಂತದ ಮತಯಾಚನೆಯಲ್ಲಿ ತೊಡಗಿಸಿ ಕೊಂಡಿದ್ದರು.

ಬೆಳಿಗ್ಗೆ 9 ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4ರವರೆಗೂ ನಡೆಯಿತು. ಎರಡೂ ಬಣಗಳ ಅಭ್ಯರ್ಥಿಗಳು, ಅವರ ಬೆಂಬಲಿಗರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಅರ್ಹ 696 ಮತಗಳ ಪೈಕಿ 674 ಮತಗಳು ಚಲಾವಣೆಗೊಂಡವು. ಚುನಾವಣಾಧಿಕಾರಿ ಗಳಾಗಿ ಐಗೂರು ಗ್ರಾಮ ಪಂಚಾಯಿತಿ ಪಿಡಿಒ ಲಿಂಗರಾಜ್, ಸಹಾಯಕ ಚುನಾವಣಾಧಿಕಾರಿಗಳಾಗಿ ಚಂದ್ರೇಗೌಡ, ಹೂವಯ್ಯ, ಅಶ್ವಥ್, ಹೇಮಂತ್, ಕಾಜೂರು ಸತೀಶ್ ಮತ್ತಿತರರು ಕಾರ್ಯ ನಿರ್ವಹಿಸಿದರು.