ಗೋಣಿಕೊಪ್ಪ ವರದಿ, ಅ. 22 : ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಅಂತರ್ಜಾಲವನ್ನು ಬಳಸಿಕೊಂಡು ಭವಿಷ್ಯದಲ್ಲಿ ನಿರ್ವಹಣೆ ಮಾಡಬಹುದಾಂತಹ ಯೋಜನೆಗಳ ಬಗ್ಗೆ ತರಬೇತಿ ನೀಡಲು ಇಂಟರ್ನೆಟ್ ಆಫ್ ಥಿಂಗ್ಸ್ ಎಂಬ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಕೊಡವ ಎಜುಕೇಶನ್ ಸೊಸೈಟಿ ಅಧ್ಯಕ್ಷ ಸಿ. ಪಿ. ಬೆಳ್ಯಪ್ಪ ಉದ್ಘಾಟಿಸಿದರು. ಈ ಸಂದರ್ಭ ಉಪಾಧ್ಯಕ್ಷ ಡಾ. ಎಂ. ಸಿ. ಕಾರ್ಯಪ್ಪ, ಕಾರ್ಯದರ್ಶಿ ರಾಕೇಶ್ ಪೂವಯ್ಯ, ಪ್ರಾಂಶುಪಾಲ ಪಿ. ಸಿ. ಕವಿತಾ, ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಕೆ. ಎ. ಮುತ್ತಪ್ಪ ಉಪಸ್ಥಿತರಿದ್ದರು.
ಭವಿಷ್ಯದಲ್ಲಿ ಅಂತರ್ಜಾಲ ವ್ಯವಸ್ಥೆ ಮಾನವನ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುವ ನಿಟ್ಟಿನಲ್ಲಿ ಬಹುತೇಕ ನಿರ್ವಹಣೆಗಳಲ್ಲಿ ಯಾವ ರೀತಿ ಅಂತರ್ಜಾಲ ಬಳಸಿ ತಾಂತ್ರಿಕವಾಗಿ ಮುಂದುವರಿಯಬಹುದು ಎಂಬ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಯಿತು.
5 ದಿನಗಳ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಿಗಿಟೋಡ್ ಟೆಕ್ನಾಲಜಿಯ ಅಭಿವೃದ್ಧಿ ಯೋಜನೆ ಮುಖ್ಯಸ್ಥ ಪಿ. ರೋಹಿತ್ ಹಾಗೂ ಇಂಜಿನಿಯರ್ ಆರ್. ಕುಮಾರ್ ಪಾಲ್ಗೊಂಡು ತರಬೇತಿ ನೀಡಿದರು.
ಮೊದಲ ಹಂತವಾಗಿ ಕಟ್ಟಡ ನಿರ್ಮಾಣ ಸಂದರ್ಭದ ಚಿಂತನೆ, ವೆಬ್ ಮೂಲಕ ಡಿಸೈನ್ಗಳ ಅವಲೋಕನ, ನಿರ್ಮಾಣದ ಯೋಜನೆಗಳು, ಇಮೇಲ್ ಅಪ್ಲಿಕೇಷನ್ ಮೂಲಕ ಯೋಜನೆ ಅನುಷ್ಠಾನ, ಡಿಸೈನ್ಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಟ್ಟಡದಲ್ಲಿನ ನೆಟ್ವರ್ಕಿಂಗ್, ವಾಹನ ಚಾಲನೆ ಸಂದರ್ಭ ಅಂತರ್ಜಾಲದ ಬಳಸುವ ವಿಧಾನ, ಕುಳಿತಲ್ಲೇ ವಾಹನ ಚಾಲನೆ, ಮನೆಗಳಲ್ಲಿನ ಕೆಲಸಗಳನ್ನು ನೆಟ್ವರ್ಕಿಂಗ್ ಮೂಲಕ ನಿರ್ವಹುಸುವದು ಸೇರಿದಂತೆ ಸಾಕಷ್ಟು ವಿಧಾನಗಳ ಬಗ್ಗೆ ತರಬೇತಿ ನೀಡಲಾಯಿತು.
ಕಾಲೇಜು ಹಂತದಲ್ಲಿ ಪ್ರಾಜೆಕ್ಟ್ ಮೂಲಕ ಅವಿಷ್ಕಾರಗಳ ಪೂರ್ವ ಸಿದ್ದತೆಗೆ ಬೇಕಾದ ಮಾಹಿತಿ ನೀಡಲಾಯಿತು.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಕೆ. ಎ. ಮುತ್ತಪ್ಪ ಮಾತನಾಡಿ, ತರಬೇತಿ ಕಾರ್ಯಾಗಾರದಿಂದ ಕಾಲೇಜು ಶಿಕ್ಷಣದ ನಂತರ ಪ್ರಾಜೆಕ್ಟ್ ಯೋಜನೆಗಾಗಿ ವಿದ್ಯಾರ್ಥಿಗಳು ಖಾಸಗಿಯಾಗಿ ಯೋಜನೆ ಅನುಷ್ಠಾನಗೊಳಿಸಬೇಕಾಗಿದೆ. ಇದರಿಂದ ಒಬ್ಬ ವಿದ್ಯಾರ್ಥಿಗೆ ಲಕ್ಷಾಂತರ ರೂ. ವೆಚ್ಚವಾಗಲಿದೆ. ಇದನ್ನು ತಡೆಗಟ್ಟಲು ವಿದ್ಯಾರ್ಥಿ ಜೀವನದಲ್ಲಿಯೇ ಪ್ರಾಜೆಕ್ಟ್ ಅವಿಷ್ಕಾರ ಮಾಡಲು ಈ ವಿಭಾಗವು ಅವಕಾಶÀ ಮಾಡಿಕೊಟ್ಟಿದೆ. ಇದರಿಂದ ಕನಿಷ್ಟ 6-7 ಪ್ರಾಜೆಕ್ಟ್ಗಳು ಅವಿಷ್ಕಾರಗೊಳ್ಳುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳಿಗೆ ಆರ್ಥಿಕ ನಷ್ಟವನ್ನು ತಗ್ಗಿಸಿ ಅವಿಷ್ಕಾರಕ್ಕೆ ಅವಕಾಶ ಕಲ್ಪಿಸಿದಂತಾಗಿದೆ ಎಂದರು. ಸುಮಾರು 90 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.