ಸಿದ್ದಾಪುರ, ಅ. 23: ಅಮ್ಮತ್ತಿ ಹೋಬಳಿ ಚೆಂಬೆಬೆಳ್ಳೂರು ಗ್ರಾಮದಿಂದ (ಕೆಎ-12-8860) ಲಾರಿಯೊಂದರಲ್ಲಿ ಅಕ್ರಮವಾಗಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಧಾಳಿ ನಡೆಸಿ ಆರೋಪಿಗಳಾದ ಎಡಪಾಲದ ಸಿ.ಯು. ಹಸನ್, ಹೆಗ್ಗಳ ಗ್ರಾಮದ ಎಂ.ಎಸ್. ರಂಜಿತ್ ಎಂಬವರು ಗಳನ್ನು ಬಂಧಿಸಿ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಲಾರಿಯಲ್ಲಿ ನೇರಳೆ, ಮಾವು, ಕರಲ್ಲಚ್ಚಿ, ಹಾಗೂ ಗರಗತ್ತಿ ಮರದ ನಾಟಾಗಳು ಕಂಡು ಬಂದಿದ್ದು ವಾಹನ ಸೇರಿ ಅಂದಾಜು ರೂ. 2 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿ ಕೊಳ್ಳಲಾಗಿದೆ. ವೀರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರೀಯ ಕ್ರಿಸ್ತರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ರೋಶಿಣಿ ಹಾಗೂ ವಲಯ ಅರಣ್ಯಾಧಿಕಾರಿ ಕೆ.ಪಿ. ಗೋಪಾಲ್ ಮಾರ್ಗದರ್ಶನ ದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕೆ.ಎಂ. ದೇವಯ್ಯ ಮತ್ತು ಅರಣ್ಯ ರಕ್ಷಕ ಅರುಣ ಸಿ. ಹಾಗೂ ಆರ್‍ಆರ್‍ಟಿ ತಂಡದ ಹರೀಶ್, ಆದರ್ಶ, ಮಂಜು, ಸಲೀಂ, ವಿನೋದ್, ಮುರುಗನ್ ಹಾಗೂ ವಾಹನ ಚಾಲಕ ಶರತ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.