ಸೋಮವಾರಪೇಟೆ, ಅ. 23: ಆಟೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಚಾಲಕನ ಕಾಲಿಗೆ ಪೆಟ್ಟಾಗಿರುವ ಘಟನೆ ಪಟ್ಟಣದ ಮಡಿಕೇರಿ ರಸ್ತೆಯಲ್ಲಿ ನಡೆದಿದೆ.
ಆನೆಕೆರೆ ಕಡೆಯಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದ ಆಟೋ ಹಾಗೂ ಪಟ್ಟಣದಿಂದ ಕಿಬ್ಬೆಟ್ಟ ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾಗಿದ್ದು, ನಡು ರಸ್ತೆಯಲ್ಲೇ ಆಟೋ ಪಲ್ಟಿ ಹೊಡೆದಿದೆ.
ಬೈಕ್‍ನಲ್ಲಿದ್ದ ಚಾಲಕ, ಬಜೆಗುಂಡಿಯ ಜೋಸ್ ಎಂಬಾತನ ಕಾಲಿಗೆ ಪೆಟ್ಟಾಗಿದ್ದರೆ, ಆಟೋ ಚಾಲಕ, ಆಲೇಕಟ್ಟೆ ನಿವಾಸಿ ಹಮೀದ್ ಅವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಘಟನೆಯಿಂದ ವಾಹನಗಳು ತೀವ್ರ ಜಖಂಗೊಂಡಿದೆ. ಗಾಯಾಳು ಜೋಸ್‍ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.