ಚೆಟ್ಟಳ್ಳಿ, ಅ. 23: ಭಾಗಮಂಡಲ ಸಮೀಪದ ತಾವೂರು ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಶಾಖೆ ವತಿಯಿಂದ “ಯೌವ್ವನ ಮರೆಯಾಗುವ ಮುನ್ನ” ಎಂಬ ವಿಷಯದ ಕುರಿತು ಯೂನಿಟ್ ಸಮ್ಮೇಳನ ನಡೆಯಿತು.
ಸಮ್ಮೇಳನದ ಅಧ್ಯಕ್ಷತೆಯನ್ನು ಎಸ್.ಎಸ್.ಎಫ್. ಯೂನಿಟ್ ಅಧ್ಯಕ್ಷ ನವಾಜ್ ಮದನಿ ವಹಿಸಿದ್ದರು. ಸಮ್ಮೇಳನವನ್ನು ಉದ್ದೇಶಿಸಿ ಸಿರಾಜುದ್ದೀನ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ವೇದಿಕೆಯಲ್ಲಿ ರಫೀಕ್ ಸಖಾಫಿ, ಉಸ್ಮಾನ್ ಮಹಲ್ ಅಧ್ಯಕ್ಷರು, ಸಿಯಾಬ್ ಇದ್ದರು.