ಸುಂಟಿಕೊಪ್ಪ, ಅ. 23: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿಗೇರಿದೆ.
ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ತಾ. 21 ರಂದು ಚುನಾವಣೆ ನಡೆದಿದ್ದು, ಬಿಜೆಪಿಯ ಎನ್.ಸಿ. ಪೊನ್ನಪ್ಪ ನೇತೃತ್ವದ ತಂಡ ಬಹು ಮತದಿಂದ ಅಧಿಕಾರದ ಗದ್ದುಗೆಗೇರಿದ್ದಾರೆ. ಸಾಲಗಾರರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾದ ಎಂ.ಎನ್. ಕೋಮಾರಪ್ಪ, ಎಸ್.ಪಿ. ನಿಂಗಪ್ಪ, ಎಂ.ಪಿ. ಪೊನ್ನಪ್ಪ, (ಕ್ಲೈವ), ಶಶಿಕಾಂತ್ ರೈ ಜಯಗಳಿಸಿದ್ದಾರೆ.
ಹಿಂದುಳಿದ ವರ್ಗದಿಂದ ಸಾಲಗಾರರಲ್ಲದ ಬಿಜೆಪಿ ಕ್ಷೇತ್ರದಿಂದ ರಮೇಶ್ ಚಂಗಪ್ಪ, ಮೋಹನ ಪಿ.ಸಿ., ಜಯಗಳಿಸಿದ್ದು. ಸಾಲಗಾರರ ಮಹಿಳಾ ಕ್ಷೇತ್ರದಿಂದ ಬಿಜೆಪಿಯ ಜಿ.ಜಿ. ಕೋಮಲ ಮತ್ತು ಲೀಲಾವತಿ ಜಯಗಳಿಸಿದ್ದಾರೆ. ಪರಿಶಿಷ್ಟ ಪಂಗಡ ಸಾಲಗಾರರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಿ.ಕೆ. ಗಂಗಾಧರ್, ಪರಿಶಿಷ್ಟ ಜಾತಿಯಿಂದ ಆರ್.ಟಿ. ಲಾಂಛನ ಜಯಗಳಿಸಿದ್ದಾರೆ. ಚುನಾವಣೆಯಲ್ಲಿ 10 ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದರೆ. ಕಾಂಗ್ರೆಸ್ಸಿನ ಕೆ.ಪಿ. ಜಗನ್ನಾಥ್, ಜರ್ಮಿ ಡಿಸೋಜ, ಕೆ.ಎಸ್. ಮಂಜುನಾಥ್ ಇವರುಗಳು ಗೆಲವು ಸಾಧಿಸಿದ್ದಾರೆ.