*ಗೋಣಿಕೊಪ್ಪಲು, ಅ. 23 : ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ ಮೂರನೆ ಬಾರಿಗೆ ಕೊಡಂದೇರ ಬಾಂಡ್ ಗಣಪತಿ ಆಯ್ಕೆಯಾಗಿದ್ದಾರೆ.ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಬಾಂಡ್ ಗಣಪತಿ ಮಂಗಳವಾರ ನಡೆದ ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸೋಮೆಯಂಡ ಕೆ. ಮಂದಣ್ಣ, ನಿರ್ದೇಶಕರಾಗಿ ಕಣಿಯರ ವಿ.ಮುತ್ತಣ್ಣ, ಬಿಲ್ಲವರ ಎ.ದುಗ್ಗಪ್ಪ, ಮುರುವಂಡ ಟಿ.ಅಯ್ಯಪ್ಪ, ಕೇಳಪಂಡ ಬಿ.ಉತ್ತಪ್ಪ, ಪುಲಿಯಂಡ ಡಿ.ದಿನೇಶ್,ಚಂಡೀರ ಎಸ್. ಬೋಪಣ್ಣ, ಹಂಚಿನಮನೆ ಡಿ.ಶ್ರೀನಿವಾಸ್, ಕಡೇಮಾಡ ಕೆ. ಕಾವೇರಮ್ಮ, ಚೇಂದಂಡ ಜೆ.ರೂಪ ಆಯ್ಕೆಯಾದರು. ಹಾತೂರು ಗ್ರಾಮ ಪಂಚಾಯಿತಿ ಪಿಡಿಒ ತಿಮ್ಯಯ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಮುಖ್ಯ ವ್ಯವಸ್ಥಾಪಕ ಪ್ರದೀಪ್, ಲೆಕ್ಕಿಗರಾದ ಕಸ್ತೂರಿ ಶೆಟ್ಟಿ, ಗುಮಾಸ್ತರಾದ ಎಂ.ಎಸ್. ಪ್ರತಿಮಾ, ಸಿಬ್ಬಂದಿ ಕೆ.ಜೆ. ರಮೇಶ್ ಹಾಜರಿದ್ದರು.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಬಾಂಡ್ ಗಣಪತಿ, 2017-18ನೇ ಸಾಲಿನಲ್ಲಿ ಸಹಕಾರ ಸಂಘ ರೂ. 60 ಕೋಟಿ ವಹಿವಾಟು ನಡೆಸಿದ್ದು, ರೂ. 21 ಲಕ್ಷ ಲಾಭಗಳಿಸಿದೆ ಎಂದರು. ಯಾವದೇ ತಾರತಮ್ಯವಿಲ್ಲದೆ ಎಲ್ಲಾ ರೈತರನ್ನು ಸಮಾನವಾಗಿ ನೋಡಲಾಗುತ್ತಿದೆ ಎಂದರು.

- ವರದಿ: ಎನ್.ಎನ್. ದಿನೇಶ್