ಶನಿವಾರಸಂತೆ, ಅ. 23: ಶನಿವಾರಸಂತೆ ಹೋಬಳಿ ಲಯನ್ಸ್ ಕ್ಲಬ್ ಸೆಂಟಿನೆಲ್ ಸಂಭ್ರಮದ ಮಾಸಿಕ ಸಭೆ ಭಾರತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆಯಿತು. ಶನಿವಾರಸಂತೆ ಹೋಬಳಿ ಲಯನ್ಸ್ ಕ್ಲಬ್ ಅಧ್ಯಕ್ಷ ರವಿಕಾಂತ್ ಎಸ್.ಎಸ್. ಗೌಡ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ನ ಪ್ರಧಾನ ಕಾರ್ಯದರ್ಶಿ ಬಿ.ಕೆ. ಚಿಣ್ಣಪ್ಪ ಮಾತನಾಡಿ, ನ. 10 ರಂದು ಕ್ಲಬ್ ಮತ್ತು ಆದಿ ಚುಂಚನಗಿರಿ ಮಠದ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ಭಾರತಿ ವಿದ್ಯಾಸಂಸ್ಥೆಯ ಆವರಣದಲ್ಲಿ ಆರೋಗ್ಯ ತಪಾಸಣೆ ಮಾಡಿ, ಉಚಿತ ಔಷಧಿಗಳನ್ನು ವಿತರಿಸಲಾಗುವದು ಎಂದರು. ಸಭೆಯಲ್ಲಿ ಕ್ಲಬ್ನ ಉಪಾಧ್ಯಕ್ಷ ಎನ್.ಬಿ. ನಾಗಪ್ಪ, ನಾರಾಯಣಸ್ವಾಮಿ, ಜಂಟಿ ಕಾರ್ಯದರ್ಶಿ ಎಂ.ಆರ್. ನಿರಂಜನ್ ಹಾಗೂ ಸದಸ್ಯರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಿ.ಕೆ. ಚಿಣ್ಣಪ್ಪ ಸ್ವಾಗತಿಸಿ, ಜಂಟಿ ಕಾರ್ಯದರ್ಶಿ ಎಂ.ಆರ್. ನಿರಂಜನ್ ವಂದಿಸಿದರು.