ಕೂಡಿಗೆ, ಅ. 23: ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ದಸರಾ ಸಿ.ಎಂ. ಕಪ್ ಕ್ರಾಸ್ ಕಂಟ್ರಿಯಲ್ಲಿ 16 ವರ್ಷ ವಯೋಮಿತಿಯ ಬಾಲಕರ 5 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಕೂಡಿಗೆ ಕ್ರೀಡಾ ಪ್ರೌಢಶಾಲೆಯ ಪಿ.ಕೆ. ನಿಶಾಂತ್ ಚಿನ್ನದ ಪದಕವನ್ನು ಗಳಿಸಿದ್ದಾರೆ. ಈ ದೂರವನ್ನು 16.23 ನಿಮಿಷಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಈ ಕ್ರೀಡಾಪಟುವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ, ತರಬೇತುದಾರರಾದ ಅಂಥೋಣಿ ಡಿಸೋಜ ಮತ್ತು ನಿಖಿಲಾ ಜೋಸೆಫ್ ತಯಾರುಗೊಳಿಸಿದ್ದರು.