ಕುಶಾಲನಗರ, ಅ. 23: ಕುಶಾಲನಗರ ಸಾಯಿ ಬಡಾವಣೆಯಲ್ಲಿ ಸರಕಾರಿ ಜಾಗದಲ್ಲಿ ದೇವಾಲಯ ನಿರ್ಮಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪ.ಪಂ. ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ. ಸಾಯಿ ಬಡಾವಣೆಯಲ್ಲಿ ಸರಕಾರಕ್ಕೆ ಮೀಸಲಾದ ನಿವೇಶನದಲ್ಲಿ ಅಕ್ರಮವಾಗಿ ಸಾಯಿ ದೇವಾಲಯ ನಿರ್ಮಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪಂಚಾಯಿತಿ ಕಾನೂನು ಸಲಹೆಗಾರರಾದ ಅಭಿಮನ್ಯು ಕುಮಾರ್ ಅವರ ಮೂಲಕ ಪ್ರಕರಣ ದಾಖಲಿಸಲಾಗಿದೆ ಎಂದು ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಮಾಹಿತಿ ನೀಡಿದ್ದಾರೆ.