ಕುಶಾಲನಗರ, ಅ. 23: ಕುಶಾಲನಗರ ಕಾವೇರಿ ನದಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ಸಮೀಪದ ಕೊಪ್ಪ ಗ್ರಾಮದ ನಿವಾಸಿ ಉಮೇಶ್ (24) ಎಂಬಾತ ಕಳೆದ ಒಂದು ವಾರದಿಂದ ನಾಪತ್ತೆ ಯಾಗಿದ್ದು ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳವಾರ ಬೆಳಗಿನ ವೇಳೆ ಕೊಪ್ಪ ಸೇತುವೆ ಕೆಳಭಾಗದಲ್ಲಿ ನದಿಯಲ್ಲಿ ಮೃತದೇಹ ತೇಲುತ್ತಿದ್ದ ಬಗ್ಗೆ ಮಾಹಿತಿ ದೊರೆತ ಕುಶಾಲನಗರ ಠಾಣಾ ಪೊಲೀಸರು ಮಹಜರು ನಡೆಸಿ ಮುಂದಿನ ಕ್ರಮಕೈಗೊಂಡರು. ಮೃತ ಉಮೇಶ್ ಸ್ಥಳೀಯ ಪ್ರವಾಸಿಧಾಮದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕೆಲವು ದಿನಗಳಿಂದ ನಾಪತ್ತೆಯಾಗಿದ್ದನು ಎನ್ನಲಾಗಿದೆ.