ವರದಿ: ರಂಜಿತಾ ಕಾರ್ಯಪ್ಪ

ಮಡಿಕೇರಿ, ಅ. 24: ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಪ್ರವಾಹ ಹಾಗೂ ಭೂಕುಸಿತ ಉಂಟಾಗಿ ಸುಮಾರು 2 ತಿಂಗಳು ಕಳೆದಿದ್ದು, ಸರಕಾರದ ನೆರವಿನ ನಿರೀಕ್ಷೆಯ ನಡುವೆ ಸಂತ್ರಸ್ತರ ತತ್ಕಾಲದ ನೆರವಿಗೆ ಗ್ರಾಮಸ್ಥರು ಹಾಗೂ ಬಂಧುಗಳು ಕೈಜೋಡಿಸಿ ದ್ದಾರೆ. ಮನೆಗಳನ್ನು ಹಾಗೂ ತೋಟಗಳನ್ನು ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ, ಪರಿಚಯಸ್ಥರ ಮನೆಯಲ್ಲಿ ಆಶ್ರಯ ಪಡೆದಿದ್ದವರು ಗ್ರಾಮಗಳಿಗೆ ಹಿಂತಿರುಗಿದ್ದಾರೆ. ಮಳೆಗಾಲದಲ್ಲಿ ಮನೆಯನ್ನು ಕಳೆದುಕೊಂಡು ಬೇರೆಯವರ ಮನೆಯಲ್ಲಿ ಆಶ್ರಯ ಪಡೆಯುತ್ತಿರುವವರು ಒಂದು ಕಡೆಯಾದರೆ ಮತ್ತೊಂದು ಕಡೆ ಬೀಳುವ ಹಂತಕ್ಕೆ ತಲುಪಿರುವ ಮನೆಗಳಿಗೆ ಆದಷ್ಟು ಬೇಗ ಮನೆ ನಿರ್ಮಾಣ ಮಾಡಿಕೊಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರೂ ಕೆಲವು ಗ್ರಾಮ ಪಂಚಾಯತಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಷ್ಟಕ್ಕೂ ಈ ಗ್ರಾಮ ಯಾವದು ಎಂದು ಓದಿ ನೋಡಿ.

ಈ ಗ್ರಾಮದಲ್ಲಿ ರಸ್ತೆ, ವಿದ್ಯುತ್ ಹಾಗೂ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಅಷ್ಟೇ ಅಲ್ಲ ಪರಿಶಿಷ್ಟ ಜಾತಿಂiÀiವರಿಗೆ ನೀಡಿದ ಜನತಾ ಮನೆಗಳು ಬೀಳುವ ಹಂತಕ್ಕೆ ತಲಪಿದೆ.

-ಅಣ್ಣಯ್ಯ, ಸ್ಥಳೀಯರು

ಪ್ಲಾಸ್ಟಿಕ್ ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇನೆ. ಅಲ್ಲದೇ ಈ ಇಳಿ ವಯಸ್ಸಿನಲ್ಲೂ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇನೆ.

- ಲಕ್ಷ್ಮಿ, ವೃದ್ಧೆತಲಪಿದೆ. ಅಲ್ಲದೆ ಲಕ್ಷ್ಮಮ್ಮ ಎಂಬ ವೃದ್ಧೆ ಪ್ಲಾಸ್ಟಿಕ್ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಾ ಇದ್ದಾರೆ. ಅಲ್ಲದೆ ಲಕ್ಷ್ಮಿ ಎಂಬವರು ಈ ಇಳಿ ವಯಸ್ಸಿನಲ್ಲೂ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಕಾಲೋನಿಗೆ ಕೆಲವು ತಿಂಗಳ ಹಿಂದೆ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರು ಭೇಟಿ ನೀಡಿದ ಸಂದರ್ಭ ಈ ವೃದ್ಧೆಯ ಮನೆಯನ್ನು ಕಂಡು ಕೂಡಿಗೆ ಗ್ರಾಮ ಪಂಚಾಯತಿ ಪಿಡಿಓ ಅವರಿಗೆ ಬೇರೆ ಮನೆ ನಿರ್ಮಾಣ ಮಾಡಿಕೊಂಡುವಂತೆ ಸೂಚನೆ ನೀಡಿದ್ದರು. ಆದರೆ ಜಿಲ್ಲಾಧಿಕಾರಿ ಮಾತಿಗೆ ಯಾವದೇ ಬೆಲೆ ಕೊಡದೆ ಅಂದು ಹೋಗಿರುವ ಅಧಿಕಾರಿಗಳು ಇಂದಿನವರೆಗೆ ಈ ಕಾಲೋನಿಗೆ ತಿರುಗಿ ನೋಡಿಲ್ಲವೆಂದು ಸ್ಥಳೀಯರಾದ ಮಹಾದೇವಮ್ಮ ಅವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

ಒಟ್ಟಾರೆಯಾಗಿ ‘ದೇವರು ವರಕೊಟ್ಟರು ಪೂಜಾರಿ ಕೊಡಲ್ಲ’ ಎಂಬ ಗಾದೆ ಮಾತಿನಂತೆ ಈ ಕಾಲೋನಿ ಕಡೆ ಯಾವದೇ ಸೌಕರ್ಯಗಳು ಮಾತ್ರ ನೀಡದೆ ಇರುವದು ವಿಪರ್ಯಾಸವೇ ಸರಿ.