ಕೂಡಿಗೆ, ಅ. 23: ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ಸೀಗೆಹೊಸೂರು ಕಾರ್ಯಕ್ಷೇತ್ರದಲ್ಲಿ ಮದಲಾಪುರ, ಮಲ್ಲೇನಹಳ್ಳಿಯ ಯಶಸ್ವಿನಿ ಸ್ವಸಹಾಯ ಸಂಘದ ಸದಸ್ಯೆ ಜೋತಿ ಅವರು ಸ್ವಸಹಾಯ ಸಂಘದ ಮೂಲಕ ಪಡೆದುಕೊಂಡ ರೂ. 1,50,000 ಪ್ರಗತಿನಿಧಿ ಮೊತ್ತಕ್ಕೆ ಜೀವ ಭದ್ರತೆಯಾಗಿ ಯೋಜನೆಯ ಮೂಲಕ ವಿಮೆಯನ್ನು ಮಾಡಿಸಿದ್ದಾರೆ. ವಿನಿಯೋಗದಾರರಾದ ಯೇಸುದಾಸ್ ಮರಣ ಸಾಂತ್ವನ ವಿಮಾ ಮೊತ್ತ ರೂ. 1,07,707 ಹಣ ಮಂಜೂರುಗೊಂಡಿದೆ. ಮಂಜೂರಾತಿ ವಿಮಾ ಮೊತ್ತವನ್ನು ಮದಲಾಪುರ ಜ್ಯೋತಿ ಅವರು ಸೋಮವಾರಪೇಟೆ ತಾಲೂಕಿನ ಯೋಜನಾ ಕಚೇರಿಯ ವ್ಯವಸ್ಥಾಪಕ ಹರೀಶ್ ಹಾಗೂ ಸಹಾಯಕ ಶ್ವೇತ ವಿತರಿಸಿದರು.
ಈ ಸಂದರ್ಭ ಕೂಡಿಗೆ ವಲಯ ಮೇಲ್ವಿಚಾರಕ ರವಿಪ್ರಸಾದ ಅಲಾಜೆ ಹಾಗೂ ಯಶಸ್ವಿನಿ ಸ್ವ ಸಹಾಯ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.