ಕೂಡಿಗೆ, ಅ. 23: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ನಡೆದು, ಐದು ವರ್ಷಗಳ ಅಧಿಕಾರಕ್ಕೆ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಆರು ಮಂದಿ ಆಯ್ಕೆಗೊಂಡಿದ್ದು, ಅವರಲ್ಲಿ ಕೆ.ಟಿ. ಅರುಣ್‍ಕುಮಾರ್, ಕೃಷ್ಣೇಗೌಡ, ತಮ್ಮಣ್ಣೇಗೌಡ, ಕೆ.ಕೆ. ಭೋಗಪ್ಪ, ಟಿ.ಕೆ. ವಿಶ್ವನಾಥ್, ಕೆ.ಕೆ. ಹೇಮಂತ್ ಕುಮಾರ್ ಆಯ್ಕೆಗೊಂಡಿದ್ದಾರೆ. ಸಾಲಗಾರರ ಮಹಿಳಾ ಕ್ಷೇತ್ರದಿಂದ ಪವಿತ್ರ, ಪಾರ್ವತಮ್ಮ ರಾಮೇಗೌಡ, ಸಾಲಗಾರರ ಹಿಂದುಳಿದ ವರ್ಗದ ಕ್ಷೇತ್ರದಿಂದ ಟಿ.ಪಿ. ಹಮೀದ್, ಲಕ್ಷ್ಮಣ್‍ರಾಜ್ ಅರಸ್, ಸಾಲಗಾರರ ಪರಿಶಿಷ್ಟ ಪಂಗಡದ ಕ್ಷೇತ್ರದಿಂದ ಎಸ್.ಎನ್. ರಾಜಾರಾವ್, ಪರಿಶಿಷ್ಟ ಜಾತಿಯಿಂದ ರಮೇಶ್ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಬಸಪ್ಪ ಅವರು ಚುನಾವಣೆಯಲ್ಲಿ ವಿಜೇತರಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ಅಧಿಕಾರಿ ರಘು ಕಾರ್ಯನಿರ್ವಹಿಸಿದ್ದಾರೆ.