ಸಿ.ಕೆ. ಉತ್ತಪ್ಪ ತಂಡ ಮುನ್ನಡೆ

ಪೊನ್ನಂಪೇಟೆ, ಅ. 24: ಪೊನ್ನಂಪೇಟೆ ಪಟ್ಟಣ ಬ್ಯಾಂಕಿನ ಚುನಾವಣೆಯಲ್ಲಿ ಚಿರಿಯಪಂಡ ಕೆ. ಉತ್ತಪ್ಪ ತಂಡ ಮುನ್ನಡೆ ಸಾಧಿಸಿದೆ.

ನಿರ್ದೇಶಕರ ಚುನಾವಣೆಯಲ್ಲಿ ಚೆಪ್ಪುಡೀರ ಎಂ. ಪೊನ್ನಪ್ಪ (601), ಚೆಪ್ಪುಡೀರ ಕೆ. ದೇವಯ್ಯ (597), ಚಿರಿಯಪಂಡ ಉತ್ತಪ್ಪ (593), ಮುಕ್ಕಾಟಿರ ಅಪ್ಪಚ್ಚು (535), ಮಚ್ಚಮಾಡ. ಬಿ. ನಂಜಪ್ಪ (499), ಚೆಪ್ಪುಡೀರ ಎಸ್ ಉತ್ತಪ್ಪ (496), ಟಿ.ಪಿ. ಗಣೇಶ್ (432) ಮತಗಳಿಂದ ಆಯ್ಕೆಯಾಗಿದ್ದಾರೆ.

ಮಹಿಳಾ ನಿರ್ದೇಶಕರುಗಳ ಸ್ಥಾನಕ್ಕೆ ಬಲ್ಯಮಂಡ ದೇವಕ್ಕಿ ಹಾಗೂ ಮೂಕಳೇರ ಬೀಟ ಹಾಗೂ ಪರಿಶಿಷ್ಠ ಜಾತಿ ಸ್ಥಾನದ ನಿರ್ದೇಶಕರಾಗಿ ಬಿಲ್ಲೇರಿಕುಟ್ಟಂಡ ಪ್ರಭು, ಹಿಂದುಳಿದ ವರ್ಗ ಬ ಸ್ಥಾನದ ನಿರ್ದೇಶಕರಾಗಿ ಕೋಳೇರ ದಯಾ ಚಂಗಪ್ಪ, ಹಿಂದುಳಿದ ವರ್ಗ ಅ ಸ್ಥಾನದ ನಿರ್ದೇಶಕರಾಗಿ ಪಿ.ಎ. ಅಸೀಸ್ ಅವಿರೋಧವಾಗಿ ಆಯ್ಕೆ ಆದರು.