ಮಡಿಕೇರಿ, ಅ. 24: ಕೊಡಗು ಜಿಲ್ಲಾ ಮರಾಠ-ಮರಾಟಿ ಸಮಾಜ ಸೇವಾ ಸಂಘ ಹಾಗೂ ಕೊಡಗು ಜಿಲ್ಲಾ ಅಂಬಾಭವಾನಿ, ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ. 11 ರಂದು ಮೈಸೂರು- ಬಂಟ್ವಾಳ ರಸ್ತೆ 275 ರ ಇಕ್ಕೆಲಗಳಲ್ಲಿ ಮಡಿಕೇರಿಯಿಂದ ತಾಳತ್ತ್ ಮನೆಯವರೆಗೆ ಸ್ವಚ್ಛತಾ ಕಾರ್ಯಕ್ರಮ ಮಾಡಲಾಗುವದು ಎಂದು ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ವರ್ ತಿಳಿಸಿದರು.

ಮಡಿಕೇರಿಯ ತಾಳತ್ತ್ ಮನೆಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ. 11 ರಂದು ನಡೆಯುವ ಕಾರ್ಯಕ್ರಮದ ಧ್ವಜಾ ರೋಹಣವನ್ನು ಸಂಘದ ಹಿರಿಯರು ಹಾಗೂ ಸಲಹೆಗಾರ ಬಾಬು ಪಾಲಂಗಾಲ ನೆರವೇರಿಸಲಿದ್ದು, ಸಂಘದ ಉಪಾಧ್ಯಕ್ಷೆ ದೇವಕ್ಕಿ ಜಿ.ಆರ್. ನಾಯ್ಕ್ ಭಾಷಣ ಮಾಡಲಿದ್ದಾರೆ. ನಂತರ ಮೈಸೂರು- ಬಂಟ್ವಾಳ ರಸ್ತೆ 275ರ ಇಕ್ಕೆಲಗಳಲ್ಲಿ ಮಡಿಕೇರಿಯಿಂದ ತಾಳತ್ತ್‍ಮನೆ ವೃತ್ತದವರೆಗೆ ಸ್ವಚ್ಛತಾ ಕಾರ್ಯ ಮಾಡಲಾಗುವದು.

ಪ್ರತಿಯೊಬ್ಬ ಸದಸ್ಯರು ಸಂಘದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಬೇಕಿದೆ. ಮುಂದಿನ ದಿನಗಳಲ್ಲಿ ಸಂಘದ ಸಭಾಂಗಣ ಕಾಮಗಾರಿ ಆರಂಭಿಸಲಿದ್ದು, ಸರ್ವ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ದೇವಕ್ಕಿ ಜಿ.ಆರ್. ನಾಯ್ಕ್, ಕಾರ್ಯದರ್ಶಿ ಎಂ.ಟಿ. ಪವನ್, ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋ ರಂಜನಾ ಸಂಘದ ಅಧ್ಯಕ್ಷ ಎಂ.ಎಸ್. ದಿವ್ಯ ಕುಮಾರ್, ಖಜಾಂಚಿ ಸಂಪತ್ ಕುಮಾರ್, ಯುವಕ ಸಂಘದ ಕಾರ್ಯದರ್ಶಿ ಆದರ್ಶ್ ಅದ್ಕಲೇ ಗಾರ್, ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್. ಯೋಗೇಂದ್ರ, ಪ್ರಮುಖರಾದ ಎಂ.ಟಿ. ದೇವಪ್ಪ, ಎಂ.ಟಿ. ಗುರುವಪ್ಪ, ಕೋಶಾಧಿಕಾರಿ ಕಾಂತಿ ಯೋಗೇಂದ್ರ, ಯುವ ವೇದಿಕೆ ಸದಸ್ಯ ಎಂ.ಎಸ್. ಗಣೇಶ್, ಸತೀಶ್, ಮಂಜುನಾಥ್ ಸಹಕಾರ್ಯದರ್ಶಿ ಮೋಹನ್, ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.