ಕುಶಾಲನಗರ, ಅ. 24: ಕುಶಾಲನಗರದ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ನೂತನ ಸಾಲಿನ ಆಡಳಿತ ಮಂಡಳಿಯ ಮೊದಲ ಅವಧಿಯ ಅಧ್ಯಕ್ಷರಾಗಿ ಸೆಲಿನ ಡಿ ಕುನ್ನ, ಉಪಾಧ್ಯಕ್ಷರಾಗಿ ಎನ್.ಎ. ಸುಶೀಲಾ ಅವಿರೋಧವಾಗಿ ಪುನರಾಯ್ಕೆ ಗೊಂಡಿದ್ದಾರೆ.

ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಡಳಿತ ಮಂಡಳಿಯ ಪ್ರಮುಖರು, ನೂತನ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಟಿ.ಕೆ. ಅಜಿತಕುಮಾರಿ, ಕಮಲಾ ಗಣಪತಿ, ಕಾವೇರಿ ಕಾಳಪ್ಪ, ಟಿ.ಪಿ. ಜಯ, ಹೆಚ್.ಎಂ. ಜಯಮ್ಮ, ನಳಿನಿ ನಂಜಪ್ಪ, ಯಶೋಧಮ್ಮ, ಎನ್.ಎ. ಸುಶೀಲಾ, ಹಿಂ.ವರ್ಗ ಎ. ಕ್ಷೇತ್ರದಿಂದ ಎಂ.ಎಂ. ಆಯಿಷಾ, ನಿರ್ಮಲ ಶಿವದಾಸ್, ಪ.ಜಾತಿ ಕ್ಷೇತ್ರದಿಂದ ಹೆಚ್.ಡಿ. ಕಮಲಮ್ಮ ಜಯಗಳಿಸಿದ್ದರು. ಮುಳ್ಳುಸೋಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಚುನಾವಣಾಧಿಕಾರಿ ಯಾಗಿ ಕಾರ್ಯನಿರ್ವಹಿಸಿದರು ಎಂದು ಸುದ್ದಿಗೋಷ್ಠಿಯಲ್ಲಿ ನೂತನ ಅಧ್ಯಕ್ಷರಾದ ಸೆಲಿನ ಡಿ ಕುನ್ನ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರುಗಳು, ಕಾರ್ಯದರ್ಶಿ ಶೈಲಕುಮಾರಿ ಉಪಸ್ಥಿತರಿದ್ದರು.