ಮಡಿಕೇರಿ, ಅ. 24: ಕೊಡಗು ಜಿಲ್ಲಾ ಮಾಜಿ ಸೈನಿಕರ 2017-18ನೇ ಸಾಲಿನ ಮಹಾಸಭೆ ಮತ್ತು ಕಳೆದ ಮಳೆಯಲ್ಲಿ ಉಂಟಾದ ಭೂ ವಿಕೋಪದಲ್ಲಿ ತೊಂದರೆಗೆ ಒಳಗಾದ ಮಾಜಿ ಸೈನಿಕರ ಕುಟುಂಬದವರಿಗೆ ಧನ ಸಹಾಯವನ್ನು ತಾ. 28 ರಂದು ಬೆಳಿಗ್ಗೆ 10 ಗಂಟೆಗೆ ನಗರದ ರೋಟರಿ ಹಾಲ್‍ನಲ್ಲಿ ಮಾಜಿ ಸೈನಿಕರ ಅಧ್ಯಕ್ಷ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುವದು.

ಸಭೆಗೆ ಕೊಡಗು ಜಿಲ್ಲೆಯ ಎಲ್ಲಾ ಮಾಜಿ ಸೈನಿಕರು ಮತ್ತು ವಿಧವೆಯರು ಹಾಜರಿರುವಂತೆ ಈ ಮೂಲಕ ತಿಳಿಸಲಾಗಿದೆ. ಹಾಗೆಯೇ ಮಳೆಯಲ್ಲಿ ಉಂಟಾದ ಭೂ ವಿಕೋಪದಲ್ಲಿ ತೊಂದರೆಗಳಾದ ಮಾಜಿ ಸೈನಿಕರ ಕುಟುಂಬದವರಿಗೆ ಧನ ಸಹಾಯ ಮಾಡಲು ಇಚ್ಚೆ ಇರುವವರು ಹಣವನ್ನು ಸಂಘದ ಕಾರ್ಯದರ್ಶಿ ಮೇಜರ್ ಓ.ಎಸ್. ಚಿಂಗಪ್ಪ ಮೊಬೈಲ್ ಸಂಖ್ಯೆ 9845331431 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.