ಮಡಿಕೇರಿ, ಅ. 24: ತಲಕಾವೇರಿಯಲ್ಲಿ ವರ್ಷಂಪ್ರತಿ ತುಲಾ ಸಂಕ್ರಮಣದಲ್ಲಿ ಪವಿತ್ರ ತೀರ್ಥೋದ್ಭವವಾಗುವದು. ಇದಾದ ಬಳಿಕ ಮುಂದಿನ ಒಂದು ತಿಂಗಳ ಕಾಲದಲ್ಲಿ ಬರುವ ಕಿರು ಸಂಕ್ರಮಣದ ತನಕ ತಲಕಾವೇರಿಯಲ್ಲಿ ದೈವಿಕ ಕೈಂಕರ್ಯಗಳಿಗೆ ಹೆಚ್ಚಿನ ಮಹತ್ವವಿದೆ. ಇದರಂತೆ ಕೊಡವ ಜನಾಂಗದಲ್ಲಿ ತೀರ್ಥೋದ್ಭವವಾದ ದಿನದಿಂದ ಹತ್ತು ದಿನಗಳ ಕಾಲದ ಪತ್ತಾಲೋದಿ ಎಂಬ ಕಾರ್ಯಕ್ಕೂ ಹೆಚ್ಚಿನ ಪ್ರಾಧಾನ್ಯತೆ ಇದೆ. ಈ ದಿನಗಳಲ್ಲಿ ತಲಕಾವೇರಿಗೆ ತೆರಳುವದು ಒಂದೆಡೆಯಾದರೆ, ವಿವಾಹವಾಗಿ ಹೋದವರು ತಮ್ಮ ತಮ್ಮ ತವರು ಮನೆಗಳಿಗೆ ಭೇಟಿ ನೀಡುವದು, ಹಿರಿಯರ ಆಶೀರ್ವಾದ ಪಡೆಯುವದು, ಪತ್ತಾಲೋದಿಯ ದಿನದಂದು ಗುರುಕಾರೋಣರಿಗೆ ಕೊಡುವ ಸಂಪ್ರದಾಯವು ನಡೆದುಕೊಂಡುಬರುತ್ತಿದೆ. ಪ್ರಸ್ತುತದ ಆಧುನೀಕತೆಯ ಭರಾಟೆಯ ನಡುವೆಯೂ ಈ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆಯಾದರೂ ಈ ಹಿಂದಿನ ವರ್ಷಗಳಂತೆ ಕಿರಿಯರಿಗೆ ಇದರ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿಯಲ್ಲಿ ಕಳೆದ ವರ್ಷದಿಂದ ಹೊಸದೊಂದು ಪ್ರಯತ್ನವನ್ನು ಅಲ್ಲಿನ ಹಿರಿಯರು ನಡೆಸಿದ್ದಾರೆ.
ಟಿ.ಶೆಟ್ಟಿಗೇರಿಯ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಮುಂದಾಳತ್ವದಲ್ಲಿ ಚಂಗ್ರಾಂದಿ ವಿಶೇಷ
(ಮೊದಲ ಪುಟದಿಂದ) ಪತ್ತಾಲೋದಿ ಎಂಬ ಕಾರ್ಯ ಕ್ರಮವನ್ನು ಸಾರ್ವಜನಿಕವಾಗಿ ಹತ್ತು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದೆ. ಪ್ರಸ್ತುತ ಎರಡನೆಯ ವರ್ಷದ ಕಾರ್ಯಕ್ರಮ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ ಟಿ. ಶೆಟ್ಟಿಗೇರಿಯ ಸಾರ್ವಜನಿಕ ಗೌರಿ ಗಣೇಶ ಉತ್ಸವ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಹಾಗೂ ಸಾಂಸ್ಕøತಿಕ ಸಂಸ್ಥೆ ಹಾಗೂ ಕೊಡವತಕ್ಕ್ ಎಳ್ತ್‍ಕಾರಡ ಕೂಟದ ಸಹಭಾಗಿತ್ವದಲ್ಲಿ ಜರುಗುತ್ತಿದೆ. ತಾ. 18 ರಂದು ಕಾವೇರಿ ತೀರ್ಥಪೂಜೆ, ಕಣಿಪೂಜೆ, ತೀರ್ಥ ವಿತರಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಪ್ರತಿದಿನ ಸಂಜೆ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಸುತ್ತಮುತ್ತಲ ಗ್ರಾಮಗಳ ಜನರು ಪಾಲ್ಗೊಳ್ಳುತ್ತಿದ್ದಾರೆ.
ತಾ. 19 ರಂದು ಬೆಂಗಳೂರಿನ ಶಾಸ್ತ್ರೀಯ ನೃತ್ಯ ಕಲಾವಿದೆ ಕಿರಣ್ ಅವರಿಂದ ಕೊಡವ ಹಾಡಿಗೆ ಭರತನಾಟ್ಯ, ತಾ. 20 ರಂದು (ಮೊದಲ ಪುಟದಿಂದ) ಪತ್ತಾಲೋದಿ ಎಂಬ ಕಾರ್ಯ ಕ್ರಮವನ್ನು ಸಾರ್ವಜನಿಕವಾಗಿ ಹತ್ತು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದೆ. ಪ್ರಸ್ತುತ ಎರಡನೆಯ ವರ್ಷದ ಕಾರ್ಯಕ್ರಮ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ ಟಿ. ಶೆಟ್ಟಿಗೇರಿಯ ಸಾರ್ವಜನಿಕ ಗೌರಿ ಗಣೇಶ ಉತ್ಸವ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಹಾಗೂ ಸಾಂಸ್ಕøತಿಕ ಸಂಸ್ಥೆ ಹಾಗೂ ಕೊಡವತಕ್ಕ್ ಎಳ್ತ್‍ಕಾರಡ ಕೂಟದ ಸಹಭಾಗಿತ್ವದಲ್ಲಿ ಜರುಗುತ್ತಿದೆ. ತಾ. 18 ರಂದು ಕಾವೇರಿ ತೀರ್ಥಪೂಜೆ, ಕಣಿಪೂಜೆ, ತೀರ್ಥ ವಿತರಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಪ್ರತಿದಿನ ಸಂಜೆ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಸುತ್ತಮುತ್ತಲ ಗ್ರಾಮಗಳ ಜನರು ಪಾಲ್ಗೊಳ್ಳುತ್ತಿದ್ದಾರೆ.
ತಾ. 19 ರಂದು ಬೆಂಗಳೂರಿನ ಶಾಸ್ತ್ರೀಯ ನೃತ್ಯ ಕಲಾವಿದೆ ಕಿರಣ್ ಅವರಿಂದ ಕೊಡವ ಹಾಡಿಗೆ ಭರತನಾಟ್ಯ, ತಾ. 20 ರಂದು ಗೋಣಿಕೊಪ್ಪಲು ಕಾವೇರಿ ಕಾಲೇಜು ಹಾಗೂ ಶ್ರೀಮಂಗಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಪತ್ತಾಲೋದಿಯ ದಿನವಾದ ತಾ. 27 ರಂದು ಟಿ. ಶೆಟ್ಟಿಗೇರಿಯ ರೂಟ್ಸ್ ವಿದ್ಯಾಸಂಸ್ಥೆಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಮೂಡಿ ಬರಲಿದೆ.
ಸಂತ್ರಸ್ತರಿಗೆ ನೆರವಿನ ಉದ್ದೇಶ
ಪ್ರಸಕ್ತ ಸಾಲಿನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಇನ್ನೂ ಹಲವಾರು ಕಾರ್ಯಚಟುವಟಿಕೆಗಳ ಮೂಲಕ ನಡೆಸುವ ಉದ್ದೇಶವಿತ್ತಾದರೂ ಪ್ರಾಕೃತಿಕ ವಿಕೋಪದಿಂದಾಗಿ ಸರಳವಾಗಿ ನಡೆಸಲಾಗುತ್ತಿದೆ. ಕಾರ್ಯಕ್ರಮದ ಸಂದರ್ಭ ದಾನಿಗಳು ಆರ್ಥಿಕ ಸಹಕಾರವನ್ನು ನೀಡುತ್ತಿದ್ದು, ಈ ತನಕ ರೂ. 1.80 ಲಕ್ಷದಷ್ಟು ಹಣ ಸಂಗ್ರಹವಾಗಿದೆ. ಸಂಗ್ರಹ ವಾಗುವ ಈ ಮೊತ್ತವನ್ನು ಪ್ರಕೃತಿ ವಿಕೋಪದಿಂದ ಸಂಕಷ್ಟ ಕ್ಕೊಳಗಾಗಿರುವವರಿಗೆ ಖುದ್ದಾಗಿ ತಲಪಿಸಲು ತೀರ್ಮಾನಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರತಿದಿನ ಸಂಜೆ ಕಾರ್ಯಕ್ರಮಕ್ಕೆ ಮುನ್ನ ಕಾವೇರಿ ಮಾತೆಯ ಪೂಜೆ ಹಾಗೂ ಸರಳ ಸಭಾ ಕಾರ್ಯ ಕ್ರಮವನ್ನು ನಡೆಸಲಾಗುತ್ತಿದೆ. ತಾವಳಗೇರಿ, ಮೂಂದ್‍ನಾಡ್ ಕೊಡವ ಸಮಾಜವು ಮರೆನಾಡ್, ತೊಡನಾಡ್, ತಾಳೇರಿನಾಡ್ ಎಂದು ಕರೆಯಲ್ಪಡುವ ಸುಮಾರು 30 ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿ ಈ ವಿಶೇಷ ಕಾರ್ಯಕ್ರಮದ ಮೂಲಕ ಪುರಾತನ ಸಂಪ್ರದಾ ಯವನ್ನು ಪರಿಚಯಿಸುವದು, ಅದರ ಮಹತ್ವವನ್ನು ಪ್ರತಿಬಿಂಬಿಸುವ ಪ್ರಯತ್ನ ನಡೆಯುತ್ತಿದ್ದು, ಸಾರ್ವಜನಿಕರು, ಸಂಘಸಂಸ್ಥೆ ಗಳಿಂದಲೂ ಬೆಂಬಲ ವ್ಯಕ್ತಗೊಳ್ಳುತ್ತಿರುವದು ವಿಶೇಷವಾಗಿದೆ.
ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ಕಾರ್ಯದರ್ಶಿ ಮನ್ನೇರ ರಮೇಶ್, ಉಪಾಧ್ಯಕ್ಷ ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್, ಕ್ರೀಡೆ ಮತ್ತು ಸಾಂಸ್ಕøತಿಕ ಸಮಿತಿಯ ಕಟ್ಟೇರ ಈಶ್ವರ, ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಗೌರಿಗಣೇಶ ಉತ್ಸವ ಸಮಿತಿ ಅಧ್ಯಕ್ಷ ದೇಖಮಾಡ ವಿನು, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಮತ್ತು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ, ಉಪಾಧ್ಯಕ್ಷೆ ಚಂಗುಲಂಡ ಅಶ್ವಿನಿ ಸತೀಶ್ ಹಾಗೂ ತಂಡದವರ ಉಸ್ತುವಾರಿಯಲ್ಲಿ ಕಾರ್ಯಕ್ರಮ ಜರುಗುತ್ತಿದೆ.
- ಶಶಿಸೋಮಯ್ಯ