ಸಿದ್ದಾಪುರ, ಅ. 24: ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಆಗಿರುವ ನಾಶ-ನಷ್ಟದ ಹಿನ್ನೆಲೆ ಜಿಲ್ಲಾ ಗಾಲ್ಫ್ ಲಿಂಕ್ಸ್ ಸಂಸ್ಥೆ ವತಿಯಿಂದ ಪರಿಹಾರ ನಿಧಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಬಳಿ ರೂ. 4 ಲಕ್ಷ ಚೆಕ್ ಅನ್ನು ಸಹಾಯ ಧನವಾಗಿ ನೀಡಲಾಯಿತು.

ಈ ಸಂದರ್ಭ ಗಾಲ್ಫ್ ಲಿಂಕ್ಸ್ ಸಂಸ್ಥೆಯ ಕ್ಯಾಪ್ಟನ್ ಕೆ.ಎಸ್. ಉತ್ತಯ್ಯ, ನಿಕಟ ಪೂರ್ವ ಕ್ಯಾಪ್ಟನ್ ಡಿ.ಎ. ಉತ್ತಪ್ಪ, ಗೌರವ ಕಾರ್ಯದರ್ಶಿ ಭರತ್ ಚೇವೂರ್, ಜಿಲ್ಲಾ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಬಿ.ಜೆ.ಪಿ. ಮುಖಂಡ ದೇವಣೀರ ಸುಜಯ್ ಹಾಜರಿದ್ದರು.