ನಾಪೆÇೀಕ್ಲು, ಅ. 24: ಸಮೀಪದ ಪಡಿಯಾಣಿ ಎಮ್ಮೆಮಾಡು ಗ್ರಾಮದ ಇಸಾಕ್ ಎಂಬವರ ಪತ್ನಿ ಸುಮಯ್ಯ (30) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಈಕೆಯ ಗಂಡ ಇಸಾಕ್ ವಿದೇಶದಲ್ಲಿ ನೌಕರಿಯಲ್ಲಿದ್ದು, ಸುಮಯ್ಯ ತನ್ನ ಎರಡು ಮಕ್ಕಳೊಂದಿಗೆ ಅತ್ತೆ ರುಕ್ಕಿಯ ಅವರೊಂದಿಗೆ ಪಡಿಯಾಣಿಯಲ್ಲಿ ವಾಸವಾಗಿದ್ದಳು. ಅತ್ತೆ ಅವಳಿಗೆ ಮಾನಸಿಕ ಹಿಂಸೆ ನೀಡುತ್ತಿದ್ದು, ಗಂಡನು ದೂರವಾಣಿ ಮೂಲಕ ಬೆದರಿಸುತ್ತಿದ್ದ ಕಾರಣ ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಎಂ.ಎ. ಜಕರಿಯ ನಾಪೆÇೀಕ್ಲು ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಾಪೆÇೀಕ್ಲು ಪೆÇಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.