ಮಡಿಕೇರಿ, ಅ. 24: ಕರ್ನಾಟಕ ಸೌಹಾರ್ದ ಸಹಕಾರ ಕಚೇರಿಯ ಕೊಡಗು ಘಟಕದ ಉದ್ಘಾಟನೆ ತಾ. 26 ರಂದು ಬೆಳಿಗ್ಗೆ 11 ಗಂಟೆಗೆ ನಗರದ ವಿದ್ಯಾ ಇಲಾಖೆ ನೌಕರರ ಪತ್ತಿನ ಸಹಕಾರ ಕಟ್ಟಡದಲ್ಲಿ ನಡೆಯಲಿದೆ. ವಿದ್ಯಾ ಇಲಾಖೆ ಸಹಕಾರ ಘಟಕ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಅಧ್ಯಕ್ಷತೆ ಯೊಂದಿಗೆ, ಪೊನ್ನಂಪೇಟೆಯ ಇಗ್ಗುತಪ್ಪ ಸೌಹಾರ್ದ ಸಂಸ್ಥೆ ಅಧ್ಯಕ್ಷ ಎಂ.ಕೆ. ಸೋಮಯ್ಯ ಹಾಗೂ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.