ಮಡಿಕೇರಿ, ಅ. 24: ಕರ್ನಾಟಕ ನಾಟಕ ಅಕಾಡೆಮಿಯು ಪ್ರಸ್ತುತ ಆಧುನಿಕ ಕನ್ನಡ ರಂಗಭೂಮಿಯಲ್ಲಿ ಹೊಸ ನಾಟಕಗಳನ್ನು ಬರೆಯಲು ಉತ್ತೇಜನ ನೀಡಲು ನಾಟಕ ರಚನಾ ಸ್ಪರ್ಧೆ ಆಯೋಜಿಸಿದೆ.
ನಾಟಕಕಾರರು ಯಾವದೇ ವಿಷಯದ ಕುರಿತು ಸ್ವತಂತ್ರ ನಾಟಕಗಳನ್ನು ರಚಿಸಬಹುದು. ಇಲ್ಲವೇ ಕಥೆ, ಕಾದಂಬರಿಯಂತಹ ವಿವಿಧ ಸಾಹಿತ್ಯ ಪ್ರಕಾರಗಳನ್ನು ಆಧರಿಸಿದ ನಾಟಕಗಳನ್ನು ಬರೆಯಬಹುದಾಗಿದೆ. ಈ ವರ್ಷ ನವೆಂಬರ್ 30 ರೊಳಗೆ ಪ್ರಕಟವಾಗದ ಹಾಗೂ ಪ್ರಯೋಗವಾಗದ ನಾಲ್ಕು ನಾಟಕಗಳಿಗೆ ಸಮಾನಾಂತರ ಬಹುಮಾನ ನೀಡಲಾಗುತ್ತದೆ. ಇತ್ತೀಚೆಗೆ ಕನ್ನಡ ರಂಗಭೂಮಿಯಲ್ಲಿ ಹೊಸ ತಲೆಮಾರಿನ ರಂಗ ನಿರ್ದೇಶಕರು ತೊಡಗಿಸಿಕೊಂಡಿದ್ದು, ಅವರೂ ಸಹ ಈ ಸ್ಪರ್ಧೆಗಾಗಿ ನಾಟಕಗಳನ್ನು ಬರೆದು ಕಳುಹಿಸಲು ಕೋರಲಾಗಿದೆ.
ರಚಿಸಿದ ನಾಟಕಗಳನ್ನು ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ ಇಮೇಲ್: ಚಿಛಿಚಿಜemಥಿ. ಟಿಚಿಣಚಿಞಚಿ@ gmಚಿiಟ.ಛಿom ದೂ. 080-22237484 ನ್ನು ಸಂಪರ್ಕಿಸಬಹುದು.