*ಗೋಣಿಕೊಪ್ಪ, ಅ. 24: ಸಮಾಜದ ವ್ಯವಸ್ಥೆಗೆ ಅನುಗುಣವಾಗಿ ಆರೋಗ್ಯ ಪೂರ್ಣವಾದ ಬದಲಾವಣೆಯನ್ನು ಸ್ವೀಕರಿಸಿದರೆ ಮಾತ್ರ ಉನ್ನತಿ ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶೆ ನೂರುನ್ನೀಸಾ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ಸಾಯಿ ಶಂಕರ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಶಬರಿಮಲೆ ದೆವಾಸ್ಥಾನಕ್ಕೆ ಮಹಿಳೆಯ ಪ್ರವೇಶ ಬೇಕೆ ಬೇಡವೆ ಎಂಬ ವಿಷಯದ ಬಗ್ಗೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ಮಹಿಳಾ ಸಬಲಿಕರಣ ಸಮಯದಲ್ಲಿ ಸುಪ್ರೀಂ ಕೋರ್ಟ್ ಇಂತಹ ಆದೇಶ ನೀಡಿರುವದು ಉತ್ತಮ ಬೆಳವಣಿಗೆ. ಆದರೆ ಇದನ್ನು ಅನುಷ್ಠಾನಗೊಳಿಸುವದು ಆಯಾಯ ವ್ಯಕ್ತಿಗಳಿಗೆ ಸಂಬಂಧಿಸಿದೆ. ಸಮಾಜ ಆರೋಗ್ಯ ಪೂರ್ಣವಾದ ಬದಲಾವಣೆಯನ್ನು ಸ್ವಾಗತಿಸಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ನಾವುಗಳು ಬಾಳುತ್ತಿದ್ದೇವೆ. ಇದರಲ್ಲಿ ಅನಗತ್ಯ ಪೈಪೋಟಿ ಬೇಡ; ಎಲ್ಲರೂ ಜೊತೆ ಜೊತೆಯಲ್ಲಿ ನಡೆದರೆ ನಮ್ಮ ಸಂಸ್ಕøತಿಯನ್ನು ಉಳಿಸಿಕೊಳ್ಳಲು ಅನುಷ್ಠಾನಗೊಳಿಸುವದು ಆಯಾಯ ವ್ಯಕ್ತಿಗಳಿಗೆ ಸಂಬಂಧಿಸಿದೆ. ಸಮಾಜ ಆರೋಗ್ಯ ಪೂರ್ಣವಾದ ಬದಲಾವಣೆಯನ್ನು ಸ್ವಾಗತಿಸಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ನಾವುಗಳು ಬಾಳುತ್ತಿದ್ದೇವೆ. ಇದರಲ್ಲಿ ಅನಗತ್ಯ ಪೈಪೋಟಿ ಬೇಡ; ಎಲ್ಲರೂ ಜೊತೆ ಜೊತೆಯಲ್ಲಿ ನಡೆದರೆ ನಮ್ಮ ಸಂಸ್ಕøತಿಯನ್ನು ಉಳಿಸಿಕೊಳ್ಳಲು
ಬದಲಾದ ಕಾಲಘಟ್ಟದಲ್ಲಿ ನಾವು ಆರೋಗ್ಯದಾಯ ಬದಲಾವಣೆ ಯನ್ನು ಬಳಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಡಿಕೇರಿಯ ವಕೀಲೆ ಕೆ.ಎಂ. ಮೀನಕುಮಾರಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ಸಾಯಿ ಶಂಕರ ವಿದ್ಯಾ ಸಂಸ್ಥೆಯ ಆದ್ಯಕ್ಷ ಕೋಳೆರ ಝರು ಗಣಪತಿ, ಪೊನ್ನಂಪೇಟೆ ವಕೀಲರ ಸಂಘಧ ಅಧ್ಯಕ್ಷ ಸುಳ್ಳಿಮಾಡ ಕಾವೇರಪ್ಪ, ವಿದ್ಯಾ ಸಂಸ್ಥೆಯ ನಿರ್ದೇಶಕ ಅರಮಾಣಮಾಡ ಸತೀಶ್ ದೇವಯ್ಯ, ವಕೀಲೆ ಕಂಜಿತಂಡ ಅನಿತ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಂಶುಪಾಲ ದಶಮಿ ಕಾರ್ಯಕ್ರಮ ನಡೆಸಿಕೊಟ್ಟರು.