ಕುಶಾಲನಗರ, ಅ. 24: ರಕ್ತದಾನ ಮಾಡುವ ಮೂಲಕ ಮಾನವೀಯ ಮೌಲ್ಯಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರ ಣಾಧಿಕಾರಿ ಡಾ. ಶಿವಕುಮಾರ್ ಕರೆ ನೀಡಿದರು. ಚಿಕ್ಕ ಅಳುವಾರದ ಮಂಗಳೂರು ವಿಶ್ವವಿದ್ಯಾನಿಲಯ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ, ರಕ್ತ ನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ, ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನ ಮಾಡುವದು ಸಾಮಾಜಿಕ ಸೇವೆಯಾಗಿದ್ದು ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದರು.

ಹೆಚ್ಚಿರುವದರಿಂದ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಯುವ ರೆಡ್ ಕ್ರಾಸ್ ಸಂಸ್ಥೆಯ ಸಂಯೋಜ ನಾಧಿಕಾರಿ ದಿಲೀಪ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಶಂಕರ್ ಹಾಗೂ ಅತೀ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿ ಸೌಮ್ಯ ರಾಜೇಂದ್ರ ಮಾತನಾಡಿದರು.

ಈ ಸಂದರ್ಭ ‘ರಕ್ತದಾನದ ಮಹತ್ವ’ ಭಾಷಣದಲ್ಲಿ ವಿಜೇತರಾದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳಾದ ಈ.ಎಸ್. ಅಭಿಜಿತ್ ಪ್ರಥಮ, ಪೂಜಾ ದ್ವಿತೀಯ ಹಾಗೂ ಜಿ.ಜಿ. ಅರ್ಪಿತಾ ತೃತೀಯ ಬಹುಮಾನ ಸ್ವೀಕರಿಸಿದರು. ಅತೀ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿ ಸುಕುಮಾರ್ ಮತ್ತು ಸೌಮ್ಯ ರಾಜೇಂದ್ರ ಅವರುಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದ ನಿರೂಪಣೆ ಯನ್ನು ಕನ್ನಡ ವಿಭಾಗದ ಉಪನ್ಯಾಸಕ ಜûಮೀರ್ ಅಹಮದ್, ಪ್ರಾರ್ಥನೆ ಯನ್ನು ವಿದ್ಯಾರ್ಥಿನಿ ಶಾಲಿನಿ, ಸ್ವಾಗತವನ್ನು ಉಪನ್ಯಾಸಕಿ ಕೆ. ಹರಿಣಾಕ್ಷಿ ಹಾಗೂ ಉಪನ್ಯಾಸಕ ಎಸ್.ಎಂ. ನಟರಾಜ್ ವಂದನಾರ್ಪಣೆ ನೆರವೇರಿಸಿದರು.