ಮಡಿಕೇರಿ, ಅ.26 : ಶಬರಿಮಲೆ ಶ್ರೀಅಯ್ಯಪ್ಪ ಸ್ವಾಮಿ ದೇವಾಲಯದ ಆಚಾರ, ವಿಚಾರಗಳನ್ನು ಉಳಿಸುವದಕ್ಕಾಗಿ ಸರಕಾರ ಮಧ್ಯ ಪ್ರವೇಶ ಮಾಡಬೇಕೆಂದು ಆಗ್ರಹಿಸಿ ನ. 2 ರಂದು ನಗರದಲ್ಲಿ ಸಾಂಕೇತಿಕ ಪ್ರತಿಭಟನಾ ಮೆರವಣಿಗೆ ನಡೆಸಲು ಮಡಿಕೇರಿಯ ಶಬರಿಮಲೆ ಶ್ರೀಅಯ್ಯಪ್ಪ ಸ್ವಾಮಿ ಸಂರಕ್ಷಣಾ ಸಮಿತಿ ಮತ್ತು ಶ್ರೀಮುತ್ತಪ್ಪ ದೇವಾಲಯ ಸಮಿತಿ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತ್ತಪ್ಪ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ.ಸುಧೀರ್, ಸಮಾನತೆಯ ಆಧಾರ ಮತ್ತು ರಾಜಕೀಯ ಉದ್ದೇಶಕ್ಕಾಗಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಶಬರಿಮಲೆಯ ಸಂಸ್ಕಾರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವದು ಅತ್ಯಂತ ಬೇಸರದ ವಿಚಾರ ಎಂದರು.

ದೇವರ ಹಾದಿಯಲ್ಲಿ ಮನುಷ್ಯ ಮಡಿಕೇರಿ, ಅ.26 : ಶಬರಿಮಲೆ ಶ್ರೀಅಯ್ಯಪ್ಪ ಸ್ವಾಮಿ ದೇವಾಲಯದ ಆಚಾರ, ವಿಚಾರಗಳನ್ನು ಉಳಿಸುವದಕ್ಕಾಗಿ ಸರಕಾರ ಮಧ್ಯ ಪ್ರವೇಶ ಮಾಡಬೇಕೆಂದು ಆಗ್ರಹಿಸಿ ನ. 2 ರಂದು ನಗರದಲ್ಲಿ ಸಾಂಕೇತಿಕ ಪ್ರತಿಭಟನಾ ಮೆರವಣಿಗೆ ನಡೆಸಲು ಮಡಿಕೇರಿಯ ಶಬರಿಮಲೆ ಶ್ರೀಅಯ್ಯಪ್ಪ ಸ್ವಾಮಿ ಸಂರಕ್ಷಣಾ ಸಮಿತಿ ಮತ್ತು ಶ್ರೀಮುತ್ತಪ್ಪ ದೇವಾಲಯ ಸಮಿತಿ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತ್ತಪ್ಪ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ.ಸುಧೀರ್, ಸಮಾನತೆಯ ಆಧಾರ ಮತ್ತು ರಾಜಕೀಯ ಉದ್ದೇಶಕ್ಕಾಗಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಶಬರಿಮಲೆಯ ಸಂಸ್ಕಾರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವದು ಅತ್ಯಂತ ಬೇಸರದ ವಿಚಾರ ಎಂದರು.

ದೇವರ ಹಾದಿಯಲ್ಲಿ ಮನುಷ್ಯ ಉಳಿಸುವ ಅಗತ್ಯವಿದ್ದು, ಹಿಂದೂಗಳ ಭಾವನೆಗೆ ಬೇಸರ ಆಗದ ರೀತಿಯಲ್ಲಿ ಸರಕಾರ ಮಧ್ಯ ಪ್ರವೇಶಿಸಿ ವಿವಾದವನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.

ಹತ್ತರಿಂದ ಐವತ್ತು ವರ್ಷದೊಳಗಿನ ಸ್ತ್ರೀ ಸಮೂಹಕ್ಕೆ ದೈಹಿಕ ಮತ್ತು ಮಾನಸಿಕ ಅಸಮತೋಲನದ ಕಾರಣ ಎದುರಾಗುವದರಿಂದ ದೇವಾಲಯ ಪ್ರವೇಶ ಮಾಡಲು ಸಾಧ್ಯವಾಗುತ್ತಿಲ್ಲ ಹೊರತು ಬಹಿಷ್ಕಾರವಲ್ಲ ಎಂದರು.

ಹಿಂದೂ ದೇವಾಲಯಗಳು ಸರ್ಕಾರದ ಅಧಿನದಲ್ಲಿರು ವದರಿಂದಲೇ ಸಂಪ್ರದಾಯವನ್ನು ಗಾಳಿಗೆ ತೂರಲಾಗುತ್ತಿದೆ. ಸನಾತನ ಹಿಂದೂ ಧರ್ಮದಲ್ಲಿ ಧಾರ್ಮಿಕ ಕಟ್ಟುಪಾಡುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ ಇಂದು ತೀರ್ಥಯಾತ್ರೆ ಮತ್ತು ಪ್ರವಾಸ ಒಂದೇ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಿಂದೂ ದೇವಾಲಯಗಳು ಹಿಂದೂ ಸಂಘಟನೆಗಳ ಅಧೀನದಲ್ಲಿರದೆ ಸರಕಾರದ ಆಡಳಿತದಲ್ಲಿರುವದೇ ಇದಕ್ಕೆ ಪ್ರಮುಖ ಕಾರಣವೆಂದರು.ಭಕ್ತರು ಕಾಣಿಕೆ ರೂಪದಲ್ಲಿ ನೀಡುವ ಚಿನ್ನಾಭರಣ ಮತ್ತು ಹಣವೇ ಸರಕಾರ ದೇವಾಲಯಗಳ ಮೇಲೆ ಹಿಡಿತ ಸಾಧಿಸಲು ಕಾರಣವೆಂದು ಡಾ. ಪಾಟ್ಕರ್ ಅಭಿಪ್ರಾಯಪಟ್ಟರು.

ಖಜಾಂಚಿ ಎನ್.ಎ.ಉಣ್ಣಿಕೃಷ್ಣನ್ ಮಾತನಾಡಿ, ನ.2 ರಂದು ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀಅಯ್ಯಪ್ಪ ಸ್ವಾಮೀ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿ ನಗರದ ಮುಖ್ಯಬೀದಿಗಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವ ದೆಂದರು.

ಸಾಂಕೇತಿಕ ಮೆರವಣಿಗೆಯ ಕುರಿತು ಪೂರ್ವಭಾವಿಯಾಗಿ ಅ. 28ರಂದು ಬೆಳಿಗ್ಗೆ 10.30ಕ್ಕೆ ವಿವಿಧ ಸಂಘ ಸಂಸ್ಥೆಗಳ ಮತ್ತು ಭಕ್ತಾಧಿಗಳ ವಿಶೇಷ ಸಭೆಯನ್ನು ಕರೆಯಲಾಗಿದೆ ಎಂದು ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಶ್ರೀ ಮುತ್ತಪ್ಪ ಉತ್ಸವ ಸಮಿತಿಯ ಅಧ್ಯಕ್ಷ ಎಸ್. ಸುರೇಶ್ ಹಾಗೂ ಪ್ರಮುಖ ಕೆ.ಕೆ.ಮಹೇಶ್ ಉಪಸ್ಥಿತರಿದ್ದರು.