ಮಡಿಕೇರಿ, ಅ. 26: ಮಡಿಕೇರಿ ಖಾಸಗಿ ಬಸ್ ನಿಲ್ದಾಣದ ಹಳೆ ಸಂಕೀರ್ಣ ಇನ್ನು ನೆನಪು ಮಾತ್ರ.. ಆಗಸ್ಟ್‍ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಈ ಹಳೆಯ ಕಟ್ಟಡ ಹಿಂಭಾಗದ ಬರೆ ಕುಸಿದು ಕಟ್ಟಡವೂ ಅರ್ಧ ಕುಸಿತಕ್ಕೆ ಒಳಗಾಗಿ ಬೀಳುವ ತೂಗುಯ್ಯಾಲೆಯಲ್ಲಿ ನೆಲ ಕಚ್ಚುವ ಹಂತದಲ್ಲಿ ನಿಂತಿತ್ತು. ವಿಕೋಪದ ಬಳಿಕ ಸುಮಾರು ಎರಡು ತಿಂಗಳವರೆಗೆ ಇಂದೋ ನಾಳೆಯೋ ಪೂರ್ಣ ಬೀಳಬಹುದು ಎಂಬ ಭಯದಿಂದ ಖಾಸಗಿ ಬಸ್‍ಗಳು ಆ ಸ್ಥಳದಲ್ಲಿ ನಿಲ್ಲದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು. ಆದರೂ, ಸಾರ್ವಜನಿಕರು ಆ ಕಟ್ಟಡದ ಕೆಳಗೆ ನಿಲ್ಲಲು ಭಯ ಪಡದೆ ಎಂದಿನಂತೆ ಅಭ್ಯಾಸಬಲದಲ್ಲಿ ನಿಂತಿರುತ್ತಿದ್ದುದು ಕಾಣಬರುತ್ತಿತ್ತು. ಈ ಕಟ್ಟಡದ ಅಪಾಯದಿಂದಾಗಿ ಇದೀಗ ಖಾಸಗಿ ಬಸ್‍ಗಳು ಎಲ್ಲೆಂದರಲ್ಲಿ ನಿಲುಗಡೆಗೊಳ್ಳಬಹುದಾದ ಅತಂತ್ರ ಸ್ಥಿತಿಯಲ್ಲಿ ಸಾಗುತ್ತಿವೆ. ಅಲ್ಲದೆ, ಪ್ರಯಾಣಿಕರೂ ಸಿಕ್ಕಿದ ಕಡೆ ಬಸ್‍ಗಳನ್ನು ಏರುವಂತಹ ದೃಶ್ಯ ನಿತ್ಯ ಎದುರಾಗುತ್ತಿದೆ.

ಈ ಕಟ್ಟಡದ ಬಗ್ಗೆ ನಗರಸÀಭೆ ಮೌನ ವಹಿಸಿದೆಯಲ್ಲ ಎನ್ನುವವರಿಗೆ ನಿನ್ನೆ ರಾತ್ರಿ ವೇಳೆಯ ಕಾರ್ಯಾಚರಣೆ ಆಶ್ಚರ್ಯ ಮೂಡಿಸಿತು. ಜೆ.ಸಿ.ಬಿಗಳ ನೆರವಿನಿಂದ ನಗರಸಭಾಧ್ಯಕ್ಷೆÀ ಕಾವೇರಮ್ಮ ಸೋಮಣ್ಣ ಅವರ ನಿರ್ದೇಶನದ ಮೇರೆಗೆ ಸಿಬ್ಬಂದಿ ಹಾಗೂ ಕಾರ್ಮಿಕರು ಕಟ್ಟಡವನ್ನು ಒಡೆಯಲು ಪ್ರಾರಂಭಿಸಿಯೇ ಬಿಟ್ಟರು. ನಗರಸಭಾ ಆಯುಕ್ತರಾದ ರಮೇಶ್ ಅವರ ಪ್ರಕಾರ ಈ ಕಟ್ಟಡ 80 ವರ್ಷಗಳಷ್ಟು ಹಳೆಯದಾಗಿದ್ದು 1928 ರಲ್ಲಿ ನಿರ್ಮಾಣಗೊಂಡಿದೆ.

(ಮೊದಲ ಪುಟದಿಂದ) ಆದರೂ ಇದನ್ನು ಒಡೆಯುವ ಕೆಲಸ ಒಂದು ರಾತ್ರಿಯಲ್ಲಿ ಪೂರ್ಣಗೊಳ್ಳಲಿಲ್ಲ. ಏಕೆಂದರೆ ಕಟ್ಟಡ ಸಾಕಷ್ಟು ಗಟ್ಟಿ ಮುಟ್ಟಾಗಿಯೇ ಇದ್ದುದು ಆಶ್ಚರ್ಯ ಮೂಡಿಸಿದೆ. ಸಂಕೀರ್ಣ ಕಟ್ಟಡ ಬೀಳಿಸಿದೊಡನೆ ರೂ. 1 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗು ವದು ಎಂದು ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಸದಸ್ಯರಾದ ಹೆಚ್. ಎಂ. ನಂದಕುಮಾರ್ ‘ಶಕ್ತಿ’ ಗೆ ತಿಳಿಸಿದ್ದಾರೆ. ಬಳಿಕ ನೂತನ ಸಂಕೀರ್ಣ ನಿರ್ಮಾಣಗೊಳಿಸಲಾಗುತ್ತದೆ. (ಮೊದಲ ಪುಟದಿಂದ) ಆದರೂ ಇದನ್ನು ಒಡೆಯುವ ಕೆಲಸ ಒಂದು ರಾತ್ರಿಯಲ್ಲಿ ಪೂರ್ಣಗೊಳ್ಳಲಿಲ್ಲ. ಏಕೆಂದರೆ ಕಟ್ಟಡ ಸಾಕಷ್ಟು ಗಟ್ಟಿ ಮುಟ್ಟಾಗಿಯೇ ಇದ್ದುದು ಆಶ್ಚರ್ಯ ಮೂಡಿಸಿದೆ. ಸಂಕೀರ್ಣ ಕಟ್ಟಡ ಬೀಳಿಸಿದೊಡನೆ ರೂ. 1 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗು ವದು ಎಂದು ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಸದಸ್ಯರಾದ ಹೆಚ್. ಎಂ. ನಂದಕುಮಾರ್ ‘ಶಕ್ತಿ’ ಗೆ ತಿಳಿಸಿದ್ದಾರೆ. ಬಳಿಕ ನೂತನ ಸಂಕೀರ್ಣ ನಿರ್ಮಾಣಗೊಳಿಸಲಾಗುತ್ತದೆ. ಸಂಕೀರ್ಣ ಆದ ಬಳಿಕ ತಮ್ಮ ಸ್ಥಿತಿ ಏನು ಎಂದು ಆತಂಕ ವ್ಯಕ್ತಪಡಿಸದರು. ಈ ಬಗ್ಗೆ ‘ಶಕ್ತಿ’ ಯೊಂದಿಗೆ ಸಮಜಾಯಿಷಿಕೆÀ ಯಿತ್ತ ಆಯುಕ್ತ ರಮೇಶ್ ಅವರು ಈ ಹಿಂದೆ ಇದ್ದವರಿಗೇ ಮತ್ತೆ ಮಳಿಗೆ ಕೊಡಲು ಅಸಾಧ್ಯ; ಹೊಸದಾಗಿ ಟೆಂಡರ್ ಕರೆದು ಹರಾಜು ಪ್ರಕ್ರಿಯೆಯಲ್ಲಿಯೇ ಅಧಿಕ ಬಿಡ್‍ದಾರರಿಗೆ ನೂತನ ಮಳಿಗೆಗಳನ್ನು ನೀಡಬೇಕಾಗುತ್ತದೆ. ಹೊಸ ಸಂಕೀರ್ಣ ನಿರ್ಮಾಣದ ಅಂದಾಜು ಪಟ್ಟಿ ಯೋಜನೆಯನ್ನು ಇನ್ನೂ ಸಿದ್ಧಪಡಿಸಬೇಕಾಗಿದೆಯಷ್ಟೆ ಎಂದು ತಿಳಿಸಿದರು.

ಮಡಿಕೇರಿ ಎಂದರೆ ಕೂಡಲೇ ನೆನಪಾಗುತ್ತ್ತಿದ್ದ..ಮೊದಲೆಲ್ಲ ದಸರಾ ಕೂಡ ನಡೆಯುತ್ತಿದ್ದ..ಹಲವರಿಗೆ ಹಲವು ರೀತಿಯ ನೆನಪುಗಳಿದ್ದ ಬಸ್ ನಿಲ್ದಾಣ ಇನ್ನು ನೆನಪು ಮಾತ್ರ’ ಹೀಗೆ ಹಲವಾರು ಮಂದಿ ಹಲವು ರೀತಿಯಲ್ಲಿ ತಮ್ಮ ವಾಟ್ಸಾಪ್ ಸಂದೇಶದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಡಿಕೇರಿಯ ಅನೇಕ ನಾಗರಿಕರು ಇದೇ ರೀತಿಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಖಾಸಗಿ ಬಸ್ ನಿಲ್ದಾಣದಲ್ಲಿ ಬಹು ಪಾಲು ಗ್ರಾಮಾಂತರ ಪ್ರದೇಶಗಳಿಂದ ಆಗಮಿಸುತ್ತಿದ್ದ ಜನರು ಈ ಕಟ್ಟಡದ ಬಳಿ ಆಸರೆ ಪಡೆಯುತ್ತಿದ್ದು, ವ್ಯವಹಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಬಸ್‍ಗಳಿಗಾಗಿ ಕಾಯುತ್ತಿದ್ದು ಇದೀಗ ಇತಿಹಾಸ ಪುಟದಲ್ಲಿ ಸೇರಿ ಹೋಗುತ್ತದೆ.