ಮಡಿಕೇರಿ, ಅ. 26 : ಶ್ರೀಮಂಗಲ ಸನಿಹದ ಕುಮಟೂರು ವಿಭಾಗದಲ್ಲಿ ಹಸುವೊಂದನ್ನು ಕಬಳಿಸಿದ್ದಲ್ಲದೆ, ತನ್ನ ಗರ್ಜನೆಯ ಮೂಲಕ ಜನತೆಯನ್ನು ಆತಂಕಕ್ಕೆ ಈಡು ಮಾಡಿರುವ ಹುಲಿಯನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ. ಹಸುವನ್ನು ಕಬಳಿಸಿದ್ದ ಹುಲಿಯನ್ನು ಸೆರೆ ಹಿಡಿಯಲು ಬೋನ್ ಅಳವಡಿಸಿ ಎರಡು ದಿನ ಕಳೆದರೂ ಪ್ರಯೋಜನವಾಗಿಲ್ಲ. ಈ ನಡುವೆ ಮಡಿಕೇರಿ, ಅ. 26 : ಶ್ರೀಮಂಗಲ ಸನಿಹದ ಕುಮಟೂರು ವಿಭಾಗದಲ್ಲಿ ಹಸುವೊಂದನ್ನು ಕಬಳಿಸಿದ್ದಲ್ಲದೆ, ತನ್ನ ಗರ್ಜನೆಯ ಮೂಲಕ ಜನತೆಯನ್ನು ಆತಂಕಕ್ಕೆ ಈಡು ಮಾಡಿರುವ ಹುಲಿಯನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ. ಹಸುವನ್ನು ಕಬಳಿಸಿದ್ದ ಹುಲಿಯನ್ನು ಸೆರೆ ಹಿಡಿಯಲು ಬೋನ್ ಅಳವಡಿಸಿ ಎರಡು ದಿನ ಕಳೆದರೂ ಪ್ರಯೋಜನವಾಗಿಲ್ಲ. ಈ ನಡುವೆ ಹುಲಿಯನ್ನು ಅರಣ್ಯಕ್ಕೆ ಅಟ್ಟಲು ಇಂದು ಅರಣ್ಯ ಇಲಾಖಾ ಸಿಬ್ಬಂದಿಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. (ಮೊದಲ ಪುಟದಿಂದ) ಇಲಾಖಾ ಸಿಬ್ಬಂದಿಗಳೊಂದಿಗೆ ಸ್ಥಳೀಯರೂ ಇದರಲ್ಲಿ ಭಾಗಿಯಾಗಿದ್ದರು. ಪಟಾಕಿಗಳನ್ನು ಸಿಡಿಸುತ್ತಾ, ಸೈರನ್ ಶಬ್ದದೊಂದಿಗೆ ಕೂಂಬಿಂಗ್ ಕಾರ್ಯ ಸಂಜೆ ತನಕವೂ ಮುಂದುವರಿಯಿತು. ಈ ನಡುವೆ ಹಸುವನ್ನು ಕಳೆದುಕೊಂಡಿರುವ ಮುಂಡುಮಾಡ ಅಪ್ಪಣ್ಣ ಅವರಿಗೆ ಇನ್ನೂ ಇಲಾಖೆಯಿಂದ ಪರಿಹಾರ ದೊರೆತಿಲ್ಲ ಎನ್ನಲಾಗಿದ್ದು, ಇಲಾಖಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.