ಮಡಿಕೇರಿ, ಅ. 26: ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರ ಮಕ್ಕಳಿಗೆ, ಅಮೇರಿಕಾ ಕನ್ನಡ ಕೂಟದ ಆಗರ (ಅಕ್ಕಾ) ಬಳಗದಿಂದ ಅಂದಾಜು ರೂ. 40 ಲಕ್ಷ ವೆಚ್ಚದ ಶಾಲಾ ಕಟ್ಟಡ ನಿರ್ಮಿಸಿ ಕೊಡುತ್ತಿರುವದು ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹಾಗೂ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮುಕ್ತ ನುಡಿಯಾಡಿದರು.‘ಅಕ್ಕಾ’ ಬಳಗದ ಅಧ್ಯಕ್ಷ ಶಿವಮೂರ್ತಿ ಕಿಲಾರ ನೇತೃತ್ವದಲ್ಲಿ ಇಂದು ಮಕ್ಕಂದೂರು ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ನಾವು ಹುಟ್ಟಿರುವ ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡುಗೆ ನೀಡುವದರೊಂದಿಗೆ, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯ ನೀಡಿದರು. ಇಂತಹ ಸದುದ್ದೇಶದಿಂದ ನೆರವೇರಿಸಿ ಮಾತನಾಡಿದ ಸಚಿವರು, ನಾವು ಹುಟ್ಟಿರುವ ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡುಗೆ ನೀಡುವದರೊಂದಿಗೆ, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯ ನೀಡಿದರು. ಇಂತಹ ಸದುದ್ದೇಶದಿಂದ ನೆರವೇರಿಸಿ ಮಾತನಾಡಿದ ಸಚಿವರು, ನಾವು ಹುಟ್ಟಿರುವ ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡುಗೆ ನೀಡುವದರೊಂದಿಗೆ, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯ ನೀಡಿದರು. ಇಂತಹ ಸದುದ್ದೇಶದಿಂದ ಕಂಠದಿಂದ ಶ್ಲಾಘಿಸುತ್ತಾ, ಬಳಗದ ಅಧ್ಯಕ್ಷ ಶಿವಮೂರ್ತಿ ಕಿಲಾರ ಅವರನ್ನು ತಮಗೆ ನೀಡ ಬಂದ ಹಾರತುರಾಯಿ ಗಳೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಮತ ನೀಡಿದ್ದೇ ಸನ್ಮಾನ: 1994ರಲ್ಲಿ ಶಾಸಕನಾದ ದಿನದಿಂದ ಇದುವರೆಗೆ ಸಾರ್ವಜನಿಕ ಸನ್ಮಾನ ನೆನಪಿನ ಕಾಣಿಕೆ ನಿರಾಕರಿಸುತ್ತಲೇ ಬಂದಿರುವ ತಾನು, ಜನತೆ ನೀಡಿ ಗೆಲ್ಲಿಸಿರುವ ಮತವನ್ನೇ ಸನ್ಮಾನವಾಗಿ ಸ್ವೀಕರಿಸುವಂತಾಗಿದೆ ಎಂದ ಶಾಸಕರು, ಪ್ರಾಕೃತಿಕ ವಿಕೋಪದಿಂದ ಹೆಚ್ಚಿನ ಹಾನಿಗೊಂಡಿರುವ ಮಕ್ಕಂದೂರು ಜನತೆಗೆ ಶಿಕ್ಷಣಕ್ಕಾಗಿ ಮಿಡಿದ ‘ಅಕ್ಕಾ’ ಬಳಗವನ್ನು ಈ ಮೂಲಕ ಗೌರವಿಸು ವದಾಗಿ ನೆನಪಿಸಿದರು.
(ಮೊದಲ ಪುಟದಿಂದ)
ಕೊಡಗಿನೊಂದಿಗಿದ್ದೇವೆ: ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೊಂದಿರುವ ಅಮೇರಿಕಾ ಕನ್ನಡ ಕೂಟದಿಂದ, ಶಿಕ್ಷಣಕ್ಕೆ ಒತ್ತು ನೀಡುವ ನಿರ್ಧಾರದಿಂದ ಶಾಲಾ ಕಟ್ಟಡ ನಿರ್ಮಿಸಲು ಮುಂದಾಗಿದ್ದು, ಸಂತ್ರಸ್ತರ ನೋವಿನೊಂದಿಗೆ ಕೈಜೋಡಿಸುವದಾಗಿ ‘ಅಕ್ಕಾ’ ಬಳಗ ಅಧ್ಯಕ್ಷ ಶಿವಮೂರ್ತಿ ಕಿಲಾರ ನುಡಿದರು. ಮುಂದಿನ ಜನವರಿ ಅಂತ್ಯದೊಳಗೆ ನಾಲ್ಕು ಕೊಠಡಿ ಸಹಿತ ಒಂದು ಸಭಾಂಗಣ ನಿರ್ಮಿಸಿಕೊಡುವದಾಗಿ ಆಶ್ವಾಸನೆ ನೀಡಿದರು.
ತುರ್ತು ನೆರವಿಗೆ ಮನವಿ: ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ, ಸರಕಾರದಿಂದ ಸಂತ್ರಸ್ತರಿಗೆ ತುರ್ತು ಮನೆಗಳ ನಿರ್ಮಾಣದೊಂದಿಗೆ, ಆರ್ಥಿಕವಾಗಿ ಪರಿಹಾರ ಒದಗಿಸಿಕೊಡಬೇಕೆಂದು ಸರಕಾರಕ್ಕೆ ಸಚಿವರ ಮೂಲಕ ಮನವಿ ಮಾಡಿದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಯಾಲದಾಳು ಪದ್ಮಾವತಿ, ಮಾಜಿ ತಾ.ಪಂ. ಸದಸ್ಯ ರವಿಕಾಳಪ್ಪ, ಮಕ್ಕಂದೂರು ಗ್ರಾ.ಪಂ. ಅಧ್ಯಕ್ಷೆ ಕಾವೇರಮ್ಮ, ಇತರ ಪ್ರಮುಖರಾದ ಹೊಸೂರು ಸತೀಶ್ ಜೋಯಪ್ಪ, ಉಪವಿಭಾಗಾಧಿಕಾರಿ ಜವರೇಗೌಡ, ಶಿಕ್ಷಣ ಇಲಾಖೆ ಉಪನಿರ್ದೇಶಕ ಮಚ್ಚಾಡೋ, ತಾಲೂಕು ಅಧಿಕಾರಿ ಗಾಯತ್ರಿ ಸೇರಿದಂತೆ ಗ್ರಾ.ಪಂ. ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ಪ್ರತಿನಿಧಿಗಳು, ಶಾಲಾ ಮುಖ್ಯೋಪಾಧ್ಯಾಯರೊಂದಿಗೆ ಶಿಕ್ಷಕ ವೃಂದ, ಪೋಷಕ ವೃಂದ, ವಿದ್ಯಾರ್ಥಿ ಸಮೂಹ ಪಾಲ್ಗೊಂಡಿದ್ದರು. ಮೈಸೂರಿನ ಇನಿದನಿ ಕಲಾ ತಂಡದಿಂದ ಹಿರಿಯ ಆಹಾರ ಇಲಾಖೆ ಉಪನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ನೇತೃತ್ವದಲ್ಲಿ ಸುಶ್ರಾವ್ಯ ನಾಡಗೀತೆಯೊಂದಿಗೆ ಇತರ ಗಾಯನಗಳು ಪ್ರೇಕ್ಷಕರ ಮನಸೂರೆಗೊಂಡಿತು.
ಮುಕ್ಕೋಡ್ಲುವಿನ ಕಲಾ ತಂಡದಿಂದ ಬೊಳಕಾಟ್, ಕೋಲಾಟ್, ಕತ್ತಿಯಾಟ್, ದುಡಿಪಾಟ್ ಇತ್ಯಾದಿ ಗಮನ ಸೆಳೆಯಿತು. ಮಕ್ಕಂದೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಬೇಕು ಬೇಡಿಕೆಗಳ ಮನವಿಯನ್ನು ಇದೇ ಸಂದರ್ಭ ಸಚಿವರಿಗೆ ಸಲ್ಲಿಸಿದರು.