ಮಡಿಕೇರಿ, ಅ. 26: ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ಮೈಸೂರು ಮತ್ತು ರಾಜ್ಯದ ಇತರ ಜಿಲ್ಲೆಗಳನ್ನು ಗಮನಿಸಿದರೆ, ಕೊಡಗಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನತೆಯೊಂದಿಗೆ ಶೋಷಿತರ ಮೇಲಿನ ದೌರ್ಜನ್ಯ ಇಳಿಮುಖವಾಗಿದೆ ಎಂದು ರಾಜ್ಯ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಡಿಜಿಪಿ ರಾಮಚಂದ್ರರಾವ್ ಇಂಗಿತ ವ್ಯಕ್ತಪಡಿಸಿದ್ದಾರೆ. ಇಂದು ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಅವರು, ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರೊಂದಿಗೆ ಚರ್ಚಿಸಿದರು.ಈ ಸಂದರ್ಭ ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ತಾವು ಮಡಿಕೇರಿ, ಅ. 26: ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ಮೈಸೂರು ಮತ್ತು ರಾಜ್ಯದ ಇತರ ಜಿಲ್ಲೆಗಳನ್ನು ಗಮನಿಸಿದರೆ, ಕೊಡಗಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನತೆಯೊಂದಿಗೆ ಶೋಷಿತರ ಮೇಲಿನ ದೌರ್ಜನ್ಯ ಇಳಿಮುಖವಾಗಿದೆ ಎಂದು ರಾಜ್ಯ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಡಿಜಿಪಿ ರಾಮಚಂದ್ರರಾವ್ ಇಂಗಿತ ವ್ಯಕ್ತಪಡಿಸಿದ್ದಾರೆ. ಇಂದು ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಅವರು, ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರೊಂದಿಗೆ ಚರ್ಚಿಸಿದರು.ಈ ಸಂದರ್ಭ ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ತಾವು (ಮೊದಲ ಪುಟದಿಂದ)
ಸರಾಸರಿ 2000 ಪ್ರಕರಣ: ಕರ್ನಾಟಕದಲ್ಲಿ ಇಂತಹ ದೌರ್ಜನ್ಯ ಪ್ರಕರಣಗಳು ವರ್ಷವೊಂದಕ್ಕೆ ಸರಾಸರಿ 2000 ರಷ್ಟು ನಡೆಯುತ್ತಿದ್ದರೂ, ವಿಚಾರಣೆ ಹಂತದಲ್ಲಿ ಸೂಕ್ತ ಸಾಕ್ಷಿ ಮತ್ತು ಹೇಳಿಕೆಗಳನ್ನು ಪಡೆಯಲಾಗದೆ ಬಹುತೇಕ ಪ್ರಕರಣಗಳು ಬಿದ್ದು ಹೋಗುತ್ತಿವೆ ಎಂದು ವಿಷಾದಿಸಿದರು. ಈ ದಿಸೆಯಲ್ಲಿ ಗಂಭೀರ ಪ್ರಯತ್ನದೊಂದಿಗೆ ತಪ್ಪಿತಸ್ಥರು ಕಾನೂನಿನಿಂದ ತಪ್ಪಿಸಿಕೊಳ್ಳದಂತೆ, ಪೊಲೀಸ್ ಇಲಾಖೆ ಪ್ರಾಮಾಣಿಕ ಪ್ರಯತ್ನಿಸಲು ಜಾಗೃತಿ ಮೂಡಿಸುತ್ತಿರುವದಾಗಿ ಎಡಿಜಿಪಿ ವಿವರಿಸಿದರು.
60 ದಿನಗಳಲ್ಲಿ ವರದಿ : ಶೋಷಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳಲ್ಲಿ ಕಡ್ಡಾಯವಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದ್ದು, ಸಾಕ್ಷ್ಯನಾಶ, ಭಯವೊಡ್ಡುವದು ಇತ್ಯಾದಿಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಬೇಕೆಂದು ತಿಳಿಹೇಳಿದ ಅವರು, ಕೆಲವೊಮ್ಮೆ ಸುಳ್ಳು ಆರೋಪಗಳು ಕೇಳಿ ಬಂದಾಗ ವಾಸ್ತವ ಪರಿಶೀಲಿಸಿ ಕಾನೂನು ತನ್ನದೇ ಕ್ರಮ ಅನುಸರಿಸುವದಾಗಿ ಭರವಸೆ ನೀಡಿದರು. ಒಟ್ಟಿನಲ್ಲಿ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಪ್ರಾಮಾಣಿಕ ಕಾಳಜಿ ಇಲಾಖೆಯದ್ದಾಗಿದೆ ಎಂದರಲ್ಲದೆ, ಈ ದಿಸೆಯಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವದಾಗಿ ಸ್ಪಷ್ಟಪಡಿಸಿದರು.