ವೀರಾಜಪೇಟೆ. ಅ.26 : ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಆಸ್ತಿ ಮಾರಾಟ ಮಾಡಿದ ಆರೋಪದ ಮೇರೆಗೆ ವೀರಾಜಪೇಟೆ ನಗರ ಪೊಲೀಸರು ಐದು ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಚಂಬೆಬೆಳ್ಳೂರು ಗ್ರಾಮ ವೀರಾಜಪೇಟೆ. ಅ.26 : ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಆಸ್ತಿ ಮಾರಾಟ ಮಾಡಿದ ಆರೋಪದ ಮೇರೆಗೆ ವೀರಾಜಪೇಟೆ ನಗರ ಪೊಲೀಸರು ಐದು ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಚಂಬೆಬೆಳ್ಳೂರು ಗ್ರಾಮ (ಮೊದಲ ಪುಟದಿಂದ) 420, 419, 506,34). ಪ್ರಕರಣ ದಾಖಲಾಗಿದೆ. ಕೊಳುವಂಡ ಪೂವಯ್ಯ ಅವರ ಸ್ನೇಹಿತ ಕಾಳಪಂಡ ಮುದ್ದಪ್ಪ ಅವರ ಮಗ ಕೆ.ಎಂ. ಅರುಣ್ ಕುಮಾರ್ ಪೂವಯ್ಯ ಅವರಿಗೆ ಸೇರಿದ ತೋಟ ಗದ್ದೆಯನ್ನು ನೋಡಿಕೊಳ್ಳುತ್ತಿದ್ದರು. ಪೂವಯ್ಯ ಅವರು ಈಚೆಗೆ ಹೃದಯ ಸಂಬಂಧಿ ಸರ್ಜರಿಗೆ ಒಳಗಾದ ಕಾರಣ ಆಸ್ತಿಯನ್ನು ಸಮಯ ದೊರೆತಾಗ ನೋಡಿಕೊಂಡು ಬರುತ್ತಿದ್ದರು. ಕೆಲವು ತಿಂಗಳ ನಂತರ ಮಾಲೀಕರ ಅನುಮತಿ ಇಲ್ಲದೆ ಅವರಿಗೆ ಗೊತ್ತಿಲ್ಲದಂತೆ ಅರುಣ್ ಕುಮಾರ್ ತೋಟ ಹಾಗೂ ಗದ್ದೆಯನ್ನು ಬೇರೆಯವರಿಗೆ 10 ವರ್ಷಕ್ಕೆ ಗುತ್ತಿಗೆ ನೀಡಿದ್ದಾರೆ. ಬೇರೆಯವರ ಮೂಲಕ ಮಾಹಿತಿ ಪಡೆದುಕೊಂಡ ಪೂವಯ್ಯ ಅವರು ದೂರವಾಣಿ ಮೂಲಕ ವಿಚಾರಿಸಿದಾಗ ಕೊಲೆ ಮಾಡುವದಾಗಿ ಬೆದರಿಕೆ ಹಾಕಿದ್ದಾರೆ.
ಪೂವಯ್ಯ ಅವರು ಗ್ರಾಮಕ್ಕೆ ಬಂದು ಗುತ್ತಿಗೆ ದಾಖಲೆ ಪತ್ರವನ್ನು ಪರಿಶೀಲಿಸಿದಾಗ ಕೆ.ಎಂ. ಅರುಣ್ಕುಮಾರ್ ಹೆಸರನ್ನು ಕೆ. ಅರುಣ್ ಅಯ್ಯಪ್ಪ, ಮತ್ತೊಂದರಲ್ಲಿ ಕೆ.ಪಿ. ಅರುಣ್ ಅಯ್ಯಪ್ಪ ಎಂದು ನಮೂದಿಸಲಾಗಿದೆ. ಕೆ.ಸಿ. ಪೂವಯ್ಯ ತಂದೆ ಎಂದು ನಮೂದಿಸಿ ನಕಲಿ ದಾಖಲೆ ಸೃಷ್ಟಿಸಿ ತನ್ನ ಹೆಸರಿಗೆ ವರ್ಗ ಮಾಡಿಕೊಂಡಿದ್ದಾರೆ. 09.07.14 ರಂದು ಸರ್ವೆ ಸಂಖ್ಯೆ 101/1 ರಲ್ಲಿ 2 ಎಕರೆ ಜಾಗವನ್ನು ಸಿ. ಪ್ರಕಾಶ್ ಅವರಿಗೆ ಕೊಳುವಂಡ ಅರುಣ್ ಅಯ್ಯಪ್ಪ ಹೆಸರಿನಲ್ಲಿ ಅಕ್ರಮವಾಗಿ ತಂದೆ ಕೊಳುವಂಡ ಪೂವಯ್ಯ ಎಂದು ನಮೂದಿಸಿ ಮಾರಾಟ ಮಾಡಲಾಗಿದೆ. 19.06.17 ರಂದು ಸರ್ವೆ ಸಂಖ್ಯೆ 101/2ರಲ್ಲಿ 2.25 ಎಕರೆ ಜಾಗವನ್ನು ಪ್ರಕಾಶ್ ಅವರ ಪತ್ನಿ ಸಿ.ಪಿ ರಮಾ ಅವರಿಗೂ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ಪ್ರಥಮ ವರ್ತಮಾನದ ವರದಿ (ಎಫ್.ಐ.ಆರ್) ಯ ದಾಖಲೆಯನ್ನು ನಗರ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.