ಮಡಿಕೇರಿ, ಅ. 25: ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಮಳೆ ವಿಕೋಪದ ಸಂದರ್ಭ ಮಡಿಕೇರಿಯ ಕೈಗಾರಿಕಾ ಬಡಾವಣೆಯ ಮೇಲ್ಭಾಗದಲ್ಲಿ ಅರಣ್ಯ ವಲಯ ಕಚೇರಿಯ ಬಳಿಯಿಂದ ಭಾರೀ ಬರೆ ಕುಸಿದು ಅನೇಕ ಕೈಗಾರಿಕೆಗಳಿಗೆ, ಸರಕಾರೀ ಕಚೇರಿಗಳಿಗೆ ಭಾರೀ ಮೇಲ್ಭಾಗದಲ್ಲಿ ಅರಣ್ಯ ವಲಯ ಕಚೇರಿಯ ಬಳಿಯಿಂದ ಭಾರೀ ಬರೆ ಕುಸಿದು ಅನೇಕ ಕೈಗಾರಿಕೆಗಳಿಗೆ, ಸರಕಾರೀ ಕಚೇರಿಗಳಿಗೆ ಭಾರೀ ಇದೀಗ ಮಡಿಕೇರಿ ನಗರಸಭೆ ಈ ಬಗ್ಗೆ ಪರಿಹಾರ ಕ್ರಮಕ್ಕೆ ಮುಂದಾಗಿ ಮುಂದಿನ ದಿನಗಳಲ್ಲಿ ಬರೆ ಕುಸಿತವಾಗ ದಂತೆ ಸೂಕ್ತ ಕಾಮಗಾರಿ ಕೈಗೊಂಡಿದೆ. ಆಶ್ಚರ್ಯವೇನು ಗೊತ್ತಾ? 98 ಸಾವಿರಕ್ಕಿಂತಲೂ ಅಧಿಕ ಮರಳಿನ ಚೀಲ ಬಳಸಿ ಭೂಕುಸಿತ ವಾಗದಂತೆ ತಡೆಗಟ್ಟುವ ಕಾಮಗಾರಿ ಕೈಗೊಳ್ಳ ಲಾಗಿದೆ. ಇಂಜಿನಿಯರ್ ಚನ್ನಕೇಶವ ಅವರ ಪ್ರಕಾರ ಕೆಳಭಾಗದಲ್ಲಿ ಕಲ್ಲಿನ ಅಡಿಪಾಯ, ಅದರ ಮೇಲೆ ಮರಳಿನ ಚೀಲಗಳ ಅಳವಡಿಕೆ, ಅದರ ಮೇಲ್ಭಾ ಗದಲ್ಲಿ ಮೇಟ್ ಹೊದಿಸಲಾಗಿದೆ, ಮಡಿಕೇರಿ ನಗರದಲ್ಲಿ ಇದೊಂದು ವಿಭಿನ್ನ ರೀತಿಯ ಕಾಮಗಾರಿಯೆನಿಸಿದೆ.

ಇದರ ಗುತ್ತಿಗೆ ಕೆಲಸ ಕೈಗೊಂಡಿರುವ ಐತಪ್ಪ ರೈ ಅವರ ಪ್ರಕಾರ ಇಂತಹ ಕೆಲಸ ಮಡಿಕೇರಿ ನಗರದಲ್ಲಿ ಅಪೂರ್ವವೆನಿಸಿದೆ. ಅಲ್ಲದೆ, ಕೆಳಭಾಗದಲ್ಲಿ ಸಾಕಷ್ಟ್ಟು ಕಲ್ಲು, ಜಲ್ಲಿಗಳನ್ನು ಉಪಯೋಗಿಸಿ ಸಮರ್ಪಕ ಅಡಿಪಾಯ ಕಲ್ಪಿಸಲಾಗಿದೆ. ಬಳಿಕ ಮರಳು ಚೀಲಗಳನ್ನು ಪೇರಿಸಿಕೊಂಡು,

(ಮೊದಲ ಪುಟದಿಂದ) ಮೆಟ್ಟಿಲು ಮಾದರಿಯಲ್ಲಿ ಕೆಲಸ ನಿರ್ವಹಿಸಲಾಗಿದೆ. ಇದರ ಕೆಳಭಾಗದಲ್ಲಿ ತಡೆಗೋಡೆಯೊಂದನ್ನು ಸದ್ಯದಲ್ಲಿಯೇ ನಿರ್ಮಿಸಲಾಗುತ್ತದೆ ಎಂದು ಅವರು ‘ಶಕ್ತಿ’ಗೆ ಮಾಹಿತಿಯಿತ್ತರು. ಈ ಕಾಮಗಾರಿ ಸಂದರ್ಭ ನಗರ ಸಭಾ ಸದಸ್ಯ ಪ್ರಕಾಶ್ ಅಚಾರ್ಯ ಆಗಿಂದಾಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದು ಸೂಕ್ತ ಸಹಕಾರ, ಮಾರ್ಗದರ್ಶನ ನೀಡಿದ್ದಾರೆ.

ಈ ದುರಂತದ ಸ್ಥಳಕ್ಕೆ ಈ ಹಿಂದೆ ಮಡಿಕೇರಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರುಗಳಾದ ಹೆಚ್. ಎಂ. ನಂದಕುಮಾರ್ ಹಾಗೂ ಪ್ರಕಾಶ್ ಆಚಾರ್ಯ ಇವರುಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಈ ಭೂಕುಸಿತವನ್ನು ಗಂಭೀರವಾಗಿ ಪರಿಗಣಿಸಿದ ಇವರುಗಳು ಭವಿಷ್ಯದಲ್ಲಿ ಇಂತಹ ದುರಂತವಾಗದಂತೆ ಪರಿಹಾರ ಕ್ರಮಕ್ಕಾಗಿ ಇಂಜಿನಿಯರ್ ಚನ್ನ ಕೇಶವ ಅವರೊಂದಿಗೆ ಚರ್ಚಿಸಿ ಅಗತ್ಯ ಕಾಮಗಾರಿಗಾಗಿ ಮಳೆ ಪರಿಹಾರ ನಿಧಿಯಿಂದ ಹಣ ಬಿಡುಗಡೆಗಾಗಿ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರಿಗೆ ಮನವಿ ಸಲ್ಲಿಸಿದ್ದು ಅವರು ಇದಕ್ಕೆ ಸ್ಪಂದಿಸಿದ್ದಾರೆ.

ಸುಮಾರು ರೂ. 80 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತ್ತಿದ್ದು ನಿನ್ನೆ ದಿನ ಸ್ಥಳಕ್ಕೆ ಭೇಟಿಯಿತ್ತ ಹೆಚ್. ಎಂ ನಂದಕುಮಾರ್ ಅವರು ನಗರ ಸಭೆಯಿಂದ ಮಳೆ ಹಾನಿ ನಿಧಿಯಿಂದ ಈ ಕೆಲಸಕ್ಕೆ ಹಣ ಕೇಳಲಾಗಿದೆ. ಈಗಾಗಲೇ ಮರಳು ಚೀಲ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಅದರ ಕೆಳಭಾಗದಲ್ಲಿ 20 ಮೀಟರ್ ಉದ್ದ ಹಾಗೂ 5 ಮೀಟರ್ ಎತ್ತರಕ್ಕೆ ತಡೆಗೋಡೆ ನಿರ್ಮಿಸಲಾಗುತ್ತದೆÉ. ಆದರೆ, ಸ್ಥಳದಲ್ಲಿ ಪರಿಶೀಲಿಸಿದಾಗ ಕನಿಷ್ಟ 50 ಮೀಟರ್ ಉದ್ದ ತಡೆಗೋಡೆ ಅಗತ್ಯವೆಂದು ಗೋಚರವಾಗುತ್ತಿದ್ದು, ಈ ಬಗ್ಗೆಯೂ ಪ್ರಯತ್ನಿಸಲಾಗುತ್ತದೆ ಎಂದು ಕಾಮಗಾರಿಯಲ್ಲಿ ಇದನ್ನು ಅಳವಡಿಸುವಂತೆ ಸ್ಥಳದಿಂದಲೇ ದೂರವಾಣಿ ಮೂಲಕ ಸಂಬಂಧಿಸಿದ ಸಿಬ್ಬಂದಿಗೆ ಸೂಚನೆಯಿತ್ತಿದ್ದಾರೆ.

ಸದ್ಯದಲ್ಲಿಯೇ ರಸ್ತೆ ದುರಸ್ತಿ

ಈ ಸಂದರ್ಭ ‘ಶಕ್ತಿ’ಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಂದಕುಮಾರ್ ಅವರು ಮಡಿಕೇರಿ ನಗರದ ರಸ್ತೆ ದುರಸ್ತಿಗೆ ಸದ್ಯದಲ್ಲಿಯೇ ಟೆಂಡರ್ ಕರೆಯಲಿರುವದಾಗಿ ತಿಳಿಸಿದರು. ಶೇ. 50 ರಷ್ಟು ರಸ್ತೆ ದುರಸ್ತಿ ಕೆಲಸವನ್ನು ನಗರಸಭೆಯ ನಿಧಿಯಿಂದಲೇ ನಿರ್ವಹಿಸಲಿದ್ದು, ಉಳಿದ ಶೇ. 50ನ್ನು ಮಳೆ ವಿಕೋಪ ನಿಧಿಯಿಂದ ಪಡೆಯಲಾಗುತ್ತದೆ. ಈಗಾಗಲೇ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರು ಕೈಗಾರಿಕಾ ಬಡಾವಣೆ ಮೇಲ್ಭಾಗದ ಕಾಮಗಾರಿಗೆ ರೂ. 80 ಲಕ್ಷ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ತಡೆಗೋಡೆ ನಿರ್ಮಾಣಕ್ಕೆ ರೂ. 1 ಕೋಟಿಗೆ ಸಮ್ಮತಿಯಿತ್ತಿದ್ದು, ಮಳೆ ವಿಕೋಪದಡಿ ರಸ್ತೆ ದುರಸ್ತಿಗೂ ಸಹಕಾರ ನೀಡಿದ್ದಾರೆ. ಅವರ ಶಿಫಾರಸು ಪತ್ರ ಸಹಿತವಾಗಿ ಸದ್ಯದಲ್ಲಿಯೇ ಮಡಿಕೇರಿ ನಗರಸಭಾ ನಿಯೋಗ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಹಣ ಬಿಡುಗಡೆಗೆ ಕೋರಲಾಗುತ್ತದೆ ಎಂದು ಮಾಹಿತಿಯಿತ್ತರು.