ವೀರಾಜಪೇಟೆ, ಅ. 26: ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಪಾತ್ರ ಬಹಳ ಮಹತ್ವದು, ಪತ್ರಿಕೆಗಳ ನಿಷ್ಪಕ್ಷಪಾತವಾದ ಸೇವೆಯಿಂದ ಇಂದು ಪ್ರಜಾಪ್ರಭುತ್ವ ಉಳಿಯಲು ಕಾರಣವಾಗಿದೆ ಎಂದು ವೀರಾಜಪೇಟೆ ಪ್ರೆಸ್ ಕ್ಲಬ್ ಅಧ್ಯಕ್ಷ ಕೋಲತಂಡ ರಘು ಮಾಚಯ್ಯ ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಯ ಪ್ರಯುಕ್ತ ‘ಪ್ರಜಾಸತ್ಯ’ ಪತ್ರಿಕ ಬಳಗದಿಂದ ಇಲ್ಲಿನ ಪುರಭವನದಲ್ಲಿ ಆಯೋಜಿಸಲಾಗಿದ್ದ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಂವಾದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರಘು ಮಾಚಯ್ಯ ಚುನಾವಣೆ ಮೊದಲು ರಾಜಕೀಯ ನಂತರ ಎಲ್ಲ ಸದಸ್ಯರುಗಳು ರಾಜಕೀಯ ರಹಿತವಾಗಿ ಪಟ್ಟಣದ ಅಭಿವೃದ್ಧಿಯತ್ತ ಕಾರ್ಯ ನಿರ್ವಹಿಸಬೇಕು ಸಾರ್ವಜನಿಕರ ಕುಂದು ಕೊರತೆಗಳಿಗೆ ನೇರವಾಗಿ ಸ್ಪಂದಿಸುವಂತಾಗಬೇಕು, ಚುನಾಯಿತ ಸದಸ್ಯರಿಗೆ ಹೊಣೆಗಾರಿಕೆ ಜವಾಬ್ದಾರಿ ಹೆಚ್ಚಿದೆ. ಪಟ್ಟಣದ ನಾಗರಿಕರಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಚುನಾಯಿತ ಸದಸ್ಯರುಗಳ ಹೋರಾಟ ಅಗತ್ಯ ಎಂದರು.

ಸಂವಾದ ಕಾರ್ಯಕ್ರಮದಲ್ಲಿ ಬಹುತೇಕ ವಾರ್ಡ್‍ಗಳ ವಿವಿಧ ಪಕ್ಷಗಳ ಅಭ್ಯರ್ಥಿಗಳು ಭಾಗವಹಿಸಿದ್ದರು. ಸಾರ್ವಜನಿಕರು ತಮ್ಮ ತಮ್ಮ ವಾರ್ಡ್ ಗಳಲ್ಲಿ ಉಂಟಾಗಿರುವ ಸಮಸ್ಯೆಗಳು ಮತ್ತು ಮುಂದೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಜನಪ್ರತಿನಿಧಿಗಳ ಗಮನ ಸೆಳೆದರು.

ಎಲ್ಲ ವಾರ್ಡ್‍ಗಳಲ್ಲಿ ಕುಡಿಯುವ ನೀರು ರಸ್ತೆ ಚರಂಡಿಗೆ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಬೇಕು. ಹಿಂದಿನ ಹದಿನಾರು ಸದಸ್ಯರುಗಳು ಯಾವದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಕಾಲ ಹರಣ ಮಾಡಿದರೆಂದು ಚುನಾವಣೆಗೆ ಸ್ಪರ್ಧಿಸಿದ ಹೊಸ ಮುಖಗಳು ಸ್ಪಂದಿಸುವಂತಾಗಬೇಕು, ಚುನಾಯಿತ ಸದಸ್ಯರಿಗೆ ಹೊಣೆಗಾರಿಕೆ ಜವಾಬ್ದಾರಿ ಹೆಚ್ಚಿದೆ. ಪಟ್ಟಣದ ನಾಗರಿಕರಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಚುನಾಯಿತ ಸದಸ್ಯರುಗಳ ಹೋರಾಟ ಅಗತ್ಯ ಎಂದರು.

ಸಂವಾದ ಕಾರ್ಯಕ್ರಮದಲ್ಲಿ ಬಹುತೇಕ ವಾರ್ಡ್‍ಗಳ ವಿವಿಧ ಪಕ್ಷಗಳ ಅಭ್ಯರ್ಥಿಗಳು ಭಾಗವಹಿಸಿದ್ದರು. ಸಾರ್ವಜನಿಕರು ತಮ್ಮ ತಮ್ಮ ವಾರ್ಡ್ ಗಳಲ್ಲಿ ಉಂಟಾಗಿರುವ ಸಮಸ್ಯೆಗಳು ಮತ್ತು ಮುಂದೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಜನಪ್ರತಿನಿಧಿಗಳ ಗಮನ ಸೆಳೆದರು.

ಎಲ್ಲ ವಾರ್ಡ್‍ಗಳಲ್ಲಿ ಕುಡಿಯುವ ನೀರು ರಸ್ತೆ ಚರಂಡಿಗೆ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಬೇಕು. ಹಿಂದಿನ ಹದಿನಾರು ಸದಸ್ಯರುಗಳು ಯಾವದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಕಾಲ ಹರಣ ಮಾಡಿದರೆಂದು ಚುನಾವಣೆಗೆ ಸ್ಪರ್ಧಿಸಿದ ಹೊಸ ಮುಖಗಳು ಗಾಯಿತ್ರಿ ನರಸಿಂಹ, ಸಿ.ಕೆ. ಪೃಥ್ವಿನಾಥ್, ಜೂಡಿವಾಜ್, ಸಾರ್ವಜನಿಕರ ಪರವಾಗಿ ಪ್ರಮುಖರಾದ ಮುಕ್ತಾರ್, ಸಿ.ಎ. ನಾಸರ್, ಕೆ.ಎ. ಷರೀಫ್, ಮಾಜಿ ಸದಸ್ಯೆ ಶೀಬಾ ಪೃಥ್ವಿನಾಥ್, ಹೆಚ್.ಜಿ. ಗೋಪಾಲ್ ಇತರ ಅನೇಕರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಪತ್ರಕರ್ತರು ಗಳಾದ ಡಿ.ಎಂ ರಾಜ್‍ಕುಮಾರ್, ಪಾರ್ಥ ಚಿಣ್ಣಪ್ಪ, ಅಬ್ದುಲ್ ರೆಹಮಾನ್, ಟಿ.ಎನ್ ಮಂಜುನಾಥ್ ಉಪಸ್ಥಿತರಿದ್ದರು. ಪತ್ರಕರ್ತೆ ಉಷಾ ಪ್ರೀತಮ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.