ಕುಶಾಲನಗರ, ಅ. 27: ಉಪನ್ಯಾಸಕಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಕುಶಾಲನಗರದಲ್ಲಿ ನಡೆದಿದೆ. ಸ್ಥಳೀಯ ಫಾತಿಮ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಶ್ವೇತ (24) ಎಂಬವರು ಮೃತಪಟ್ಟ ದುರ್ದೈವಿ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಶ್ವೇತ ಅವರು ಅವಿವಾಹಿತರಾಗಿದ್ದು ಸ್ಥಳೀಯ ಕರಿಯಪ್ಪ ಬಡಾವಣೆಯಲ್ಲಿ ನೆಲೆಸಿದ್ದರು. ಮೃತರ ಅಂತ್ಯಕ್ರಿಯೆ ಸೋಮವಾರಪೇಟೆಯಲ್ಲಿ ನಡೆಯಿತು.