ಮಡಿಕೇರಿ, ಅ. 27: ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಡಾ. ಎನ್.ಎಸ್. ನವೀನ್ ಮತ್ತು ಗೌರವ ಕಾರ್ಯದರ್ಶಿಯಾಗಿ ಡಾ. ಸಿ.ಆರ್. ಪ್ರಶಾಂತ್ ಅಧಿಕಾರ ಸ್ವೀಕರಿಸಿದ್ದಾರೆ.
ಸಂಘದ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಅವರಿಂದ ನೂತನ ಆಡಳಿತ ಮಂಡಳಿ ಪ್ರಮುಖರು ಅಧಿಕಾರ ಸ್ವೀಕರಿಸಿದರು.
ಸಂಘದ ಖಚಾಂಚಿಯಾಗಿ ಡಾ. ಪ್ರಸಾದ್ ಹೊಳ್ಳ, ಉಪಾಧ್ಯಕ್ಷರಾಗಿ ಡಾ. ಅಜಿತ್ ಕುಮಾರ್, ಡಾ. ಶ್ಯಾಮ್ ಅಪ್ಪಣ್ಣ, ಜಂಟಿ ಕಾರ್ಯದರ್ಶಿಯಾಗಿ ಡಾ. ಎಂ.ಎ. ದೇವಯ್ಯ, ಡಾ. ಕರುಂಬಯ್ಯ, ಜಂಟಿ ಖಜಾಂಚಿಯಾಗಿ ಡಾ. ಎನ್.ಎ. ಸುಧಾಕರ್, ಮುಖ್ಯ ಸಲಹೆಗಾರರಾಗಿ ಡಾ. ಎಂ.ಜಿ. ಪಾಟ್ಕರ್, ಡಾ. ಸಿ.ಎಂ. ದೇವಯ್ಯ, ಡಾ. ರವಿ ಅಪ್ಪಾಜಿ ಆಯ್ಕೆಯಾಗಿದ್ದಾರೆ.
ಅಂತೆಯೇ, ಮೆಡಿಕೋ ಲೀಗಲ್ ಸೆಲ್ ಅಧ್ಯಕ್ಷರಾಗಿ ಡಾ. ಸೂರ್ಯಕುಮಾರ್, ಕ್ರಾಕರಿ ಸೆಲ್ ಅಧ್ಯಕ್ಷರಾಗಿ ಡಾ. ಮೋಹನ್ ಅಪ್ಪಾಜಿ, ಆಡಳಿತ ಮಂಡಳಿ ನಿರ್ದೇಶಕರಾಗಿ ಡಾ. ಜನಾರ್ಧನ್, ಡಾ. ಅಯ್ಯಪ್ಪ, ಡಾ. ಬಿ.ಕೆ. ರಾಜೇಶ್ವರಿ, ಡಾ. ರೇಣುಕಾ, ಡಾ. ಯಶೋಧರ ಪೂಜಾರಿ, ಡಾ. ಕುಂಜ್ಞಿ ಅಬ್ದುಲ್ಲ, ಡಾ. ಕಸ್ತೂರಿ, ಡಾ. ಕಿಶೋರ್ ಕುಮಾರ್ ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು.